ಕಣ್ಣಿನ ದೃಷ್ಟಿ ಮಂದವಾಗಲು 8 ಪ್ರಮುಖ ಕಾರಣಗಳು 

By Reshma
Feb 06, 2025

Hindustan Times
Kannada

ಕಣ್ಣಿನ ಪೊರೆ, ಗ್ಲುಕೋಮಾ, ಸಮೀಪ ದೃಷ್ಟಿದೋಷ ಮತ್ತು ಹೈಪರ್‌ಮೆಟ್ರೊಪಿಯಾ ಮುಂತಾದ ಕಣ್ಣಿನ ಸಮಸ್ಯೆಗಳು ದೃಷ್ಟಿ ಮಂದವಾಗಲು ಕಾರಣವಾಗಬಹುದು 

ಮಧುಮೇಹವು ಕಣ್ಣಿನಲ್ಲಿರುವ ರಕ್ತನಾಳಗಳಿಗೆ ಹಾನಿ ಮಾಡುತ್ತದೆ. ಇದು ದೃಷ್ಟಿ ಮಂದವಾಗಲು ಕಾರಣವಾಗುತ್ತದೆ 

ಅಧಿಕ ರಕ್ತದೊತ್ತಡವು ದೃಷ್ಟಿಯ ನರಗಳಿಗೆ ಹಾನಿ ಮಾಡುತ್ತದೆ, ಇದು ದೃಷ್ಟಿ ಮಂದವಾಗಲು ಕೂಡ ಕಾರಣವಾಗುತ್ತದೆ

ಕೆಲವು ರೀತಿಯ ಔಷಧಿಗಳು ದೃಷ್ಟಿ ಮಂದವಾಗಲು ಕಾರಣವಾಗಬಹುದು. ಅಂತಹ ಸಮಯದಲ್ಲಿ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು

ವಿಟಮಿನ್ ಎ, ಸಿ ಮತ್ತು ಇಯಂತಹ ಕೆಲವು ಜೀವಸತ್ವಗಳ ಕೊರತೆಯು ದೃಷ್ಟಿ ಮಂದವಾಗಲು ಕಾರಣವಾಗಬಹುದು 

ದೇಹದಲ್ಲಿ ನೀರಿನಾಂಶ ಕಡಿಮೆಯಾಗುವುದು ಕಣ್ಣುಗಳು ಮಸುಕಾಗಲು ಕಾರಣವಾಗಬಹುದು. ಅದಕ್ಕಾಗಿ ಸಾಕಷ್ಟು ನೀರು ಕುಡಿಯಬೇಕು

ಸಾಕಷ್ಟು ನಿದ್ದೆ ಇಲ್ಲದೇ ಇರುವುದು ಕಣ್ಣುಗಳು ಮಸುಕಾಗಿ ಕಾಣಲು ಕಾರಣವಾಗುತ್ತದೆ. ಅದಕ್ಕಾಗಿ ವೈದ್ಯರು 8 ಗಂಟೆಗಳ ಕಾಲ ನಿದ್ದೆ ಮಾಡಲು ಶಿಫಾರಸು ಮಾಡುತ್ತಾರೆ 

ಪಾರ್ಶ್ವವಾಯು ಕೂಡ ಕಣ್ಣುಗಳಿಗೆ ರಕ್ತ ಪೂರೈಸುವ ನರಗಳಿಗೆ ಹಾನಿ ಮಾಡುತ್ತದೆ. ಇದು ಕೂಡ ದೃಷ್ಟಿ ಮಂದವಾಗಲು ಕಾರಣವಾಗುತ್ತದೆ

ಅತಿ ಹೆಚ್ಚು ಬಾರಿ ಡಕೌಟ್, ರೋಹಿತ್ ಶರ್ಮಾ ನಂಬರ್ ವನ್‌