ಪಾದದಲ್ಲಿ ಅಡಗಿದೆ ಆರೋಗ್ಯದ ಗುಟ್ಟು,  ಈ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡದಿರಿ 

By Reshma
May 03, 2025

Hindustan Times
Kannada

ದೇಹದ ಆರೈಕೆಯ ವಿಚಾರಕ್ಕೆ ಬಂದರೆ ನಾವು ಪಾದಗಳನ್ನು ನಿರ್ಲಕ್ಷ್ಯ ಮಾಡುತ್ತೇವೆ. ಆದರೆ ಈ ಪಾದಗಳೇ ನಮ್ಮ ಆರೋಗ್ಯ ರಹಸ್ಯವನ್ನು ಬಿಚ್ಚಿಡುತ್ತವೆ. ಪಾದಗಳಿಂದ ಆರೋಗ್ಯದ ಗುಟ್ಟು ತಿಳಿಯುವುದು ಹೇಗೆ ನೋಡಿ 

ಪಾದಗಳು ಮತ್ತು ಕಣಕಾಲುಗಳಲ್ಲಿ ನಿರಂತರ ಊತವು ಹೃದಯ, ಮೂತ್ರಪಿಂಡ ಅಥವಾ ಯಕೃತ್ತಿನ ಸಮಸ್ಯೆಯನ್ನು ಸೂಚಿಸುತ್ತದೆ. ಗರ್ಭಾವಸ್ಥೆ ಹಾಗೂ ನಿರಂತರವಾಗಿ ಕುಳಿತುಕೊಳ್ಳುವುದರಿಂದಲೂ ಪಾದ ಊದಬಹುದು

ನಿರಂತರ ನೋವು, ಸುಡುವುದು ಅಥವಾ ಪಾದಗಳಲ್ಲಿ ಜುಮ್ಮೆನ್ನಿಸುವುದು ನರರೋಗದ ಲಕ್ಷಣವಾಗಿರಬಹುದು. ಅದರಲ್ಲೂ ವಿಶೇಷವಾಗಿ ಮಧುಮೇಹಿಗಳಲ್ಲಿ. ನರಗಳ ಒತ್ತಡ, ಕಳಪೆ ರಕ್ತ ಪರಿಚಲನೆಯೂ ಇದಕ್ಕೆ ಕಾರಣವಿರಬಹುದು ‌

ಕಾಲುಗಳ ಮೇಲಿನ ಚರ್ಮ ನೀಲಿ, ಕೆಂಪು ಮತ್ತು ಹಳದಿಯಾಗುವುದು ರಕ್ತ ಪರಿಚಲನೆಯ ಸಮಸ್ಯೆ, ರೇನಾಡ್ಸ್ ಕಾಯಿಲೆ ಅಥವಾ ಸೋಂಕನ್ನು ಸೂಚಿಸಬಹುದು 

ಉಗುರುಗಳು ದಪ್ಪವಾಗುವುದು, ಉಗುರಿನ ಬಣ್ಣ ಬದಲಾವಣೆ, ಉಗುರಿನಲ್ಲಿ ಬಿರುಕು, ಶಿಲೀಂಧ್ರ ಸೋಂಕು ಸೋರಿಯಾಸಿಸ್ ಅಥವಾ ಥೈರಾಯಿಡ್ ಸಮಸ್ಯೆಯ ಲಕ್ಷಣವಾಗಿರಬಹುದು 

ಪಾದದಲ್ಲಿ ಸಣ್ಣ ಗುಳ್ಳೆಯಾಗುವುದು ಅಥವಾ ಗುಳ್ಳೆಗಳು ದೀರ್ಘಕಾಲದವರೆಗೆ ಗುಣವಾಗದೇ ಇರುವುದು ಮಧುಮೇಹ ಮತ್ತು ರಕ್ತದ ಹರಿವಿನ ತೊಂದರೆಯನ್ನು ಸೂಚಿಸಬಹುದು 

ಅಸಹಜವಾಗಿ ಪಾದಗಳು ಥಂಡಿಯಾಗುವುದು ಅಥವಾ ಬಿಸಿಯಾಗುವುದು ಥೈರಾಯ್ಡ್ ಅಥವಾ ರಕ್ತ ಹರಿವಿನ ಕೊರತೆಯನ್ನು ಸೂಚಿಸಬಹುದು 

ಕಾಲುಗಳಲ್ಲಿನ ದೌರ್ಬಲ್ಯ, ಕೀಲು ನೋವು ಅಥವಾ ಅಸಮತೋಲನವು ಸಂಧಿವಾತ, ನರಹಾನಿ ಅಥವಾ ಸ್ನಾಯುವಿನ ಸಮಸ್ಯೆಯ ಲಕ್ಷಣವಾಗಿರಬಹುದು 

ಪಾದಗಳಲ್ಲಿ ಆಳವಾದ ಬಿರುಕು, ಚರ್ಮ ಅತ್ಯಂತ ಶುಷ್ಕವಾಗುವುದು ಶಿಲೀಂಧ್ರ ಸೋಂಕು, ಎಸ್ಕಿಮಾ ಮತ್ತು ನಿರ್ಜಲೀಕರಣದ ಸಂಕೇತವಾಗಿರಬಹುದು 

ನಿರಂತರ ಊತ, ನೋವು, ಪಾದಗಳಲ್ಲಿ ಬಣ್ಣ ಬದಲಾವಣೆ ಅಥವಾ 2–3 ವಾರಗಳಲ್ಲಿ ವಾಸಿಯಾಗದ ಗಾಯಗಳನ್ನು ಕಂಡರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ 

ಪಾದಗಳನ್ನು ನಿಯಮಿತವಾಗಿ ಸ್ವಚ್ಛ ಮಾಡಬೇಕು. ಆರಾಮದಾಯಕ ಬೂಟುಗಳನ್ನು ಧರಿಸಬೇಕು. ನಿಯಮಿತ ಮಧುಮೇಹ ತಪಾಸಣೆಯೂ ಮುಖ್ಯವಾಗುತ್ತದೆ

ಮಕ್ಕಳು ಆಗಾಗ ಅಳುತ್ತಾರೆಯೇ? ಈ ಕಾರಣಗಳಿರಬಹುದು