ಈ ಆಹಾರಗಳನ್ನು ಎಂದಿಗೂ 2ನೇ ಬಾರಿ ಬಿಸಿ ಮಾಡಲೇಬೇಡಿ

By Reshma
Apr 17, 2024

Hindustan Times
Kannada

ಮನೆಯಲ್ಲಿ ಮಿಕ್ಕಿದ ಆಹಾರವನ್ನು ಬಿಸಿ ಮಾಡಿ ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ ಆಹಾರವನ್ನು 2ನೇ ಬಾರಿ ಬಿಸಿ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂಬುದು ನಿಮಗೆ ಗೊತ್ತಾ? ಕೆಲವು ಆಹಾರಗಳನ್ನು ಮತ್ತೆ ಬಿಸಿ ಮಾಡಿದಾಗ ಅದರಲ್ಲಿರುವ ಪೌಷ್ಟಿಕಾಂಶಗಳು ನಾಶವಾಗುತ್ತದೆ. 

ಮೊಟ್ಟೆ 

ಮೊಟ್ಟೆಯನ್ನು ಪುನಃ ಬಿಸಿ ಮಾಡುವುದರಿಂದ ಸಾಲ್ಮೊನೆಲ್ಲಾದಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಅವುಗಳನ್ನು ಆಗಿಂದಾಗ್ಗೆ ಸೇವಿಸುವುದು ಉತ್ತಮ. ಇಲ್ಲದೇ ಹೋದರೆ ಅರ್ಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು. 

ಟೀ 

ಚಹಾವನ್ನು ಬಿಸಿ ಮಾಡುವುದರಿಂದ ರುಚಿ ಬದಲಾಗುತ್ತದೆ. ಇದರಿಂದ ಪಾಲಿಫಿನಾಲ್‌ ಮತ್ತು ಕ್ಯಾಟೆಚಿನ್‌ಗಳು ಸೇರಿದಂತೆ ವಿವಿಧ ಸಂಯುಕ್ತಗಳ ಬಿಡುಗಡೆಗೆ ಕಾರಣವಾಗುತ್ತದೆ. ಇದರಿಂದ ಅತಿಸಾರ, ಹೊಟ್ಟೆಯುಬ್ಬರ ಹಾಗೂ ಇನ್ನಿತರ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು. 

ಮಶ್ರೂಮ್‌

ಅಣಬೆ ಪ್ರೊಟೀನ್‌ ಸಮೃದ್ಧವಾಗಿರುವುದು ನಿಜ, ಆದರೆ ಇದನ್ನು ಸರಿಯಾಗಿ ಸಂಗ್ರಹಿಸಿಲ್ಲ ಎಂದರೆ ಕಿಣ್ವಗಳು, ಬ್ಯಾಕ್ಟೀರಿಯಾಗಳು ಸೇರಿಕೊಳ್ಳಬಹುದು. ಅಣಬೆಯ ಆಹಾರ ಪದಾರ್ಥವನ್ನು ಮತ್ತೆ ಬಿಸಿ ಮಾಡುವುದರಿಂದ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದು ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗಲು ಕಾರಣವಾಗಬಹುದು.

ಆಲೂಗೆಡ್ಡೆ

ಆಲೂಗೆಡ್ಡೆಯನ್ನು ಪುನಃ ಬಿಸಿ ಮಾಡುವುದರಿಂದ ಸೋಲನೈನ್‌ ಎಂಬ ವಿಷಕಾರಿ ಸಂಯಕ್ತ ಅಭಿವೃದ್ಧಿಯಾಗುತ್ತದೆ. ಒಂದೇ ವೇಳೆ ನೀವು ಇದನ್ನು ಬಿಸಿ ಮಾಡಲೇಬೇಕು ಎಂದಾದರೆ ಇದರಿಂದ ತಯಾರಿಸಿ ಆಹಾರ ಪದಾರ್ಥವನ್ನು ಫ್ರಿಜ್‌ನಲ್ಲಿಡಿ, ನಂತರ ಹೊರ ತೆಗೆದು ಬಿಸಿ ಮಾಡಿ.

ಪಾಲಕ್‌ ಸೊಪ್ಪು 

ಅಣಬೆಯಂತೆ ಪಾಲಕ್‌ ಸೊಪ್ಪಿನಲ್ಲೂ ನೈಟ್ರೇಟ್‌ ಅಂಶವಿದೆ. ಇದನ್ನು ಮತ್ತೆ ಬಿಸಿ ಮಾಡಿದ ನೈಟ್ರೇಟ್‌ ಅಂಶ ಹೆಚ್ಚಬಹುದು. ಇದು ದೇಹಕ್ಕೆ ಸಮಸ್ಯೆ ಉಂಟು ಮಾಡಬಹುದು. 

ಐಪಿಎಲ್ 2024ರ ಟಾಪ್ 5 ಅತಿ ಉದ್ದದ ಸಿಕ್ಸರ್