ಅಡುಗೆಗೆ ಬಳಸುವ ಇಂಗಿನಿಂದ ಆರೋಗ್ಯಕ್ಕೆ ಇಷ್ಟೊಂದು ಪ್ರಯೋಜನ
By Reshma
Jun 24, 2024
Hindustan Times
Kannada
ಅಡುಗೆ ಮಾಡುವಾಗ ಒಂದು ಚಿಟಿಕೆ ಇಂಗು ಬಳಸದಿದ್ದರೆ ರುಚಿಯ ಜೊತೆಗೆ ಆರೋಗ್ಯವನ್ನೂ ಕಳೆದುಕೊಳ್ಳುತ್ತೀರಿ.
ಇಂಗು ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು ಇದನ್ನು ಅಡುಗೆಯಲ್ಲಿ ಬಳಸುವುದು ಬಹಳ ಮುಖ್ಯ.
ಅಡುಗೆಗೆ ಸ್ವಲ್ಪ ಇಂಗು ಹಾಕಿದರೆ ಜೀರ್ಣಾಂಗ ವ್ಯವಸ್ಥೆಯ ಕಾರ್ಯಚಟುವಟಿಕೆ ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ.
ಇದು ಕಾರ್ಬೋಹೈಡ್ರೇಟ್ ಹೊಂದಿದ್ದು ಚಯಾಪಚಯವನ್ನು ವೃದ್ಧಿಸುತ್ತದೆ.
ಇದರಲ್ಲಿರುವ ಕಬ್ಬಿಣಾಂಶವು ರಕ್ತವನ್ನು ಶುದ್ಧೀಕರಿಸುತ್ತದೆ. ಇದು ರಕ್ತಹೀನತೆಯನ್ನು ತಡೆದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಇಂಗಿನಲ್ಲಿ ಪೊಟ್ಯಾಶಿಯಂ ಹಾಗೂ ಕ್ಯಾಲ್ಸಿಯಂ ಅಂಶವಿದ್ದು ಇದು ದೇಹಕ್ಕೆ ಅತ್ಯಗತ್ಯ.
ಇಂಗು ತಿನ್ನುವುದರಿಂದ ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ. ರಕ್ತದ ಹರಿವು ಕಡಿಮೆಯಾಗಿ ನೋವು ನಿವಾರಣೆಯಾಗುತ್ತದೆ.
ಇದರಲ್ಲಿ ಉತ್ಕರ್ಷಣ ನಿರೋಧಕಗಳಿದ್ದು ದೇಹಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ದಿನಾಂಕ ಯಾವುದು?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ