ಉತ್ತಮ ಆರೋಗ್ಯಕ್ಕೆ ಕೋಳಿಮೊಟ್ಟೆ: ನಿಮಗೆ ಗೊತ್ತಿರಬೇಕಾದ ವಿಷಯಗಳಿವು
By Reshma
Jul 28, 2024
Hindustan Times
Kannada
ಮೊಟ್ಟೆಯಲ್ಲಿ ವಿಟಮಿನ್ ಬಿ2, ಬಿ5, ಬಿ12 ಹಾಗೂ ಅಮೈನೋ ಆಮ್ಲಗಳು ಸಮೃದ್ಧವಾಗಿರುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್ ಹಾಗೂ ಪ್ರೊಟೀನ್ ಚರ್ಮವನ್ನು ಹೈಡ್ರೇಟ್ ಮಾಡುತ್ತವೆ.
ಮೊಟ್ಟೆ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಇದರಲ್ಲಿರುವ ಕಬ್ಬಿಣ ಮತ್ತು ಪೋಲೆಟ್ ಅಂಶ ರಕ್ತಹೀನತೆಯನ್ನು ತಡೆಯುತ್ತದೆ.
ಮೊಟ್ಟೆಯಲ್ಲಿ ಸಲೇನಿಯಮ್ ಅಧಿಕವಾಗಿರುತ್ತದೆ. ಹಾಗಾಗಿ ಮೊಟ್ಟೆ ತಿನ್ನುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ.
ಮೊಟ್ಟೆಯು ಒಮೆಗಾ 3 ಕೊಬ್ಬಿನಾಮ್ಲ, ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು, ಪ್ರೊಟೀನ್‌ಗಳು ಮತ್ತು ಆರೋಗ್ಯಕರ ಕೊಬ್ಬಿನಾಂಶ ಸಮೃದ್ಧವಾಗಿರುತ್ತದೆ.
ದೇಹಕ್ಕೆ ಅಗತ್ಯವಿರುವ ಎಲ್ಲಾ 9 ಅಮೈನೋ ಆಮ್ಲಗಳನ್ನು ಹೊಂದಿರುವ ಏಕೈಕ ಆಹಾರವೆಂದರೆ ಮೊಟ್ಟೆ. ಅದಕ್ಕಾಗಿ ಮೊಟ್ಟೆಯನ್ನು ತಪ್ಪದೇ ಸೇವಿಸಬೇಕು.
ಮೊಟ್ಟೆಗಳಲ್ಲಿ ಫೋಲೆಟ್ ಅಂಶ ಸಮೃದ್ಧವಾಗಿದೆ. ಇದು ಕೆಂಪುರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ.
ಮೊಟ್ಟೆ ಮಕ್ಕಳಾದಿಯಾಗಿ ಪ್ರತಿಯೊಬ್ಬರಿಗೂ ಉತ್ತಮ. ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ.
ದೇಶದಲ್ಲಿ ನೀವು ಖರೀದಿಸಬಹುದಾದ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳು
ಮುಂದಿನ ಸ್ಟೋರಿ ಕ್ಲಿಕ್ ಮಾಡಿ