ಮಳೆಗಾಲದ ಆರೋಗ್ಯಕ್ಕೆ ಹೇಳಿ ಮಾಡಿಸಿದ ಸ್ಪೆಷಲ್‌ ಚಹಾಗಳು 

By Reshma
Jul 29, 2024

Hindustan Times
Kannada

ಮಳೆಗಾಲದಲ್ಲಿ ಬಿಸಿ ಬಿಸಿ ಚಹಾ, ಜೊತೆಗೆ ಈರುಳ್ಳಿ ಪಕೋಡ ಇದ್ರೆ ಆಹಾ, ಸ್ವರ್ಗ ಎನ್ನಿಸುತ್ತದೆ. ಹಾಗಂತ ಖಾಲಿ ಚಹಾ ಕುಡಿಯುವುದಕ್ಕಿಂತ ಆರೋಗ್ಯಕ್ಕೂ ಹಿತ ಎನ್ನಿಸುವ ಚಹಾ ಕುಡಿಯಬೇಕು. 

ಮಳೆಗಾಲದಲ್ಲಿ ಹೊಸ ರುಚಿಯ ಚಹಾ ಕುಡಿಯಲು ಪ್ರಯತ್ನಿಸಿದರೆ ಈ ದೇಸಿ ಚಹಾಗಳನ್ನು ಟ್ರೈ ಮಾಡಬಹುದು. 

ಅರಸಿನ ಮತ್ತು ಕರಿಮೆಣಸು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ. ಇದರಿಂದ ಚಹಾ ತಯಾರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಿತವಾಗಿರುತ್ತದೆ. 

ಒಂದು ಕಪ್‌ ನೀರಿಗೆ ಅರ್ಧ ಚಮಚ ಅರಿಸಿನ ಪುಡಿ ಮತ್ತು ಚಿಟಿಕೆ ಕರಿಮೆಣಸು ಸೇರಿಸಿ ಕುದಿಸಿ. ಈಗ ನಿಮ್ಮ ಚಹಾ ಕುಡಿಯಲು ಸಿದ್ಧ. 

ದಾಲ್ಚಿನ್ನಿಯಿಂದ ಕೂಡ ಚಹಾ ತಯಾರಿಸಬಹುದು. ಇದು ಕೂಡ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು. 

1 ಕಪ್‌ ನೀರಿನಲ್ಲಿ ಅರ್ಧ ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಬೆರೆಸಿ, ಚೆನ್ನಾಗಿ ಕುದಿಸಿ. ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ. 

ನಿಂಬೆ, ಶುಂಠಿ, ಜೇನುತುಪ್ಪ ಸೇರಿಸಿ ತಯಾರಿಸಿದ ಚಹಾವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಶಕ್ತಿ ವರ್ಧಕವಾಗಿಯೂ ಕೆಲಸ ಮಾಡುತ್ತದೆ.

1ಕಪ್‌ ನೀರಿಗೆ ಸ್ವಲ್ಪ ತುರಿದ ಶುಂಠಿ ಸೇರಿಸಿ, ಚೆನ್ನಾಗಿ ಕುದಿಸಿ. ಇದನ್ನು ಫಿಲ್ಟರ್‌ ಮಾಡಿ. ಅದಕ್ಕೆ ನಿಂಬೆರಸ ಸೇರಿಸಿ. 

ಮಳೆಗಾಲದಲ್ಲಿ ಸೋಂಕಿನ ಅಪಾಯ ಹೆಚ್ಚು. ಹಾಗಾಗಿ ಲವಂಗ ಮತ್ತು ಏಲಕ್ಕಿ ಸೇರಿಸಿದ ಚಹಾವು ನಿಮ್ಮನ್ನು ರೋಗಗಳಿಂದ ರಕ್ಷಿಸುತ್ತದೆ.

ಒಂದು ಕಪ್‌ ನೀರು ತೆಗೆದುಕೊಂಡು ಅದಕ್ಕೆ 2-3 ಏಲಕ್ಕಿ, ಅರ್ಧ ಚಮಚ ದಾಲ್ಚಿನ್ನಿ ಮತ್ತು 2-3 ಲವಂಗ ಹಾಕಿ ಕುದಿಸಿ. ನಂತರ ಚಹಾ ಫಿಲ್ಟರ್‌ ಮಾಡಿ ಕುಡಿಯಿರಿ. 

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS