ಮಳೆಗಾಲವು ಭೂಮಿಗೆ ತಂಪು ನೀಡಿದರೂ, ಇಳೆಯಲ್ಲಿರುವ ಕೊಳೆಯನ್ನೆಲ್ಲಾ ಕೊಚ್ಚಿಕೊಂಡು ಹೋದರೂ ಸಸ್ಯವರ್ಗವನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ ಮಳೆಗಾಳದಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ಸಾಕಷ್ಟು ಜಾಗೃತೆ ವಹಿಸಬೇಕು. ಮಳೆಗಾಲದಲ್ಲಿ ತಿನ್ನಬಾರದಂತಹ ಕೆಲವು ಆಹಾರಗಳಿವು.
ಕಾರ್ಬೋನೇಟ್ ಅಂಶ ಇರುವ ಪಾನೀಯಗಳನ್ನು ಮಳೆಗಾಲದಲ್ಲಿ ಕುಡಿಯಬಾರದು, ಇದು ನಿರ್ಜಲೀಕರಣ ಉಂಟು ಮಾಡಿ, ಜೀರ್ಣಾಂಶ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು.
ಮಜ್ಜಿಗೆಯಲ್ಲಿ ದೇಹವನ್ನು ತಂಪು ಮಾಡುವ ಅಂಶವಿದ್ದು, ಇದು ಶೀತ ಸಂಬಂಧಿ ಕಾಯಿಲೆಗಳು ಹೆಚ್ಚಲು ಕಾರಣವಾಗಬಹುದು. ಅದಕ್ಕಾಗಿ ಮಳೆಗಾಲಕ್ಕೆ ಮಜ್ಜಿಗೆ ಒಳ್ಳೆಯದಲ್ಲ.
ಮಳೆಗಾಲದ ವಾತಾವರಣಕ್ಕೆ ಕರಿದ ಆಹಾರಗಳು ಹೆಚ್ಚು ಇಷ್ಟವಾಗುತ್ತವೆ. ಆದರೆ ಇವನ್ನು ಅತಿಯಾಗಿ ತಿನ್ನುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಕಾಣಿಸಬಹುದು. ಅದರಲ್ಲೂ ಹೊರಗಡೆಯಿಂದ ತಪ್ಪಿಯೂ ಕರಿದ ಆಹಾರ ಸೇವಿಸಬಾರದು.