ಈ 8 ಕಾರಣಕ್ಕಾಗಿ ಪ್ರತಿದಿನ ಸೂರ್ಯಕಾಂತಿ ಬೀಜ ಸೇವಿಸಿ

freepik

By Priyanka Gowda
Oct 13, 2024

Hindustan Times
Kannada

ಪೋಷಕಾಂಶಗಳಿಂದ ಸಮೃದ್ಧವಾಗಿರುವ ಸೂರ್ಯಕಾಂತಿ ಬೀಜಗಳ ಸೇವನೆಯಿಂದ ಹಲವಾರು ಆರೋಗ್ಯ ಪ್ರಯೋಜನಗಳಿವೆ. 

freepik

ಸೂರ್ಯಕಾಂತಿ ಬೀಜಗಳಲ್ಲಿ ಒಮೆಗಾ- 6 ಕೊಬ್ಬಿನಾಮ್ಲಗಳು ಸಮೃದ್ಧವಾಗಿದೆ. ಮೆದುಳಿನ ಕಾರ್ಯ, ಹೃದಯದ ಆರೋಗ್ಯಕ್ಕೆ ಉತ್ತಮವಾಗಿದ್ದು, ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

freepik

ಸೂರ್ಯಕಾಂತಿ ಬೀಜಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದು, ಸ್ನಾಯುಗಳ ಬೆಳವಣಿಗೆ ಸೇರಿದಂತೆ  ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

freepik

ಸೂರ್ಯಕಾಂತಿ ಬೀಜಗಳಲ್ಲಿ ವಿಟಮಿನ್ ಇ, ಮೆಗ್ನೀಸಿಯಂ ಸೇರಿದಂತೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಕಾರಿ.

freepik

ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೃದಯ ರಕ್ತನಾಳದ ಆರೋಗ್ಯಕ್ಕೆ ಸಹಕಾರಿ. ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುವಲ್ಲೂ ಸಹಕಾರಿ.

Canva

ಇದರಲ್ಲಿ ವಿಟಮಿನ್ ಇ, ಸತು ಸಮೃದ್ಧವಾಗಿದ್ದು, ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. 

freepik

ಉತ್ಕರ್ಷಣಾ ನಿರೋಧಕಗಳು ಹಾಗೂ ಆರೋಗ್ಯಕರ ಕೊಬ್ಬುಗಳಲ್ಲಿ ಸೂರ್ಯಕಾಂತಿ ಬೀಜಗಳು ಸಮೃದ್ಧವಾಗಿದ್ದು, ಚರ್ಮವನ್ನು ಪೋಷಿಸುವಲ್ಲಿ ಸಹಕಾರಿಯಾಗಿದೆ.

freepik

ಇದರಲ್ಲಿರುವ ಹೆಚ್ಚಿನ ಪ್ರೋಟೀನ್, ಫೈಬರ್ ಹಾಗೂ ಆರೋಗ್ಯಕರ ಕೊಬ್ಬಿನ ಅಂಶದಿಂದಾಗಿ ಹಸಿವನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ತೂಕ ಇಳಿಕೆಗೂ ಬೆಂಬಲಿಸುತ್ತದೆ.

freepik

ಮೆಗ್ನೀಸಿಯಮ್ ಮತ್ತು ರಂಜಕದ ಉತ್ತಮ ಮೂಲವಾಗಿದ್ದು, ಮೂಳೆ ಸಂಬಂಧಿತ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

freepik

ಸಲಾಡ್‍ಗಳು, ಮೊಸರು, ಸ್ಮೂಥಿ ಅಥವಾ ಓಟ್ಮೀಲ್‍ಗೆ ಸೇರಿಸಿ ಇದನ್ನು ಸೇವಿಸಬಹುದು. ಅಥವಾ ಹಾಗೆಯೇ ತಿನ್ನಬಹುದು. ಮಿತವಾಗಿ ಸೇವಿಸುವುದು ಬಹಳ ಮುಖ್ಯ.

freepik

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು