ಮುಟ್ಟಿನ ನೋವು ಹೆಚ್ಚಿಸುವ ಆಹಾರ ಪದಾರ್ಥಗಳಿವು  

By Reshma
Nov 15, 2024

Hindustan Times
Kannada

ಹಾರ್ಮೋನ್ ಅಸಮತೋಲನ ಹಾಗೂ ಗರ್ಭಾಶಯದ ಸಂಕೋಚನದಿಂದಾಗಿ ಮುಟ್ಟಿನ ನೋವು ಸಂಭವಿಸುತ್ತದೆ. ಇದನ್ನು ಡಿಸ್ಮೋರಿಯಾ ಎಂದು ಕೂಡ ಕರೆಯಲಾಗುತ್ತದೆ. ಸಾಮಾನ್ಯವಾಗಿ ಹೊಟ್ಟೆಯ ಕೆಳಭಾಗದಲ್ಲಿ ನೋವು ಸಂಭವಿಸುತ್ತದೆ 

ಕೆಲವೊಮ್ಮೆ ಈ ನೋವು ಅಸಹನೀಯವಾಗಿರುತ್ತದೆ. ಅಂತಹ ಸಮಯದಲ್ಲಿ ಆಹಾರ ಪದ್ಧತಿಯ ಮೇಲೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಕೆಲವು ಆಹಾರಗಳು ಮುಟ್ಟಿನ ನೋವನ್ನು ಹೆಚ್ಚಿಸಬಹುದು 

ಮುಟ್ಟಿನ ದಿನಗಳಲ್ಲಿ ಕಾಫಿ, ಟೀ, ಸೋಡಾದಂತಹ ಕೆಫಿನ್ ಅಂಶ ಇರುವ ಆಹಾರಗಳ ಸೇವನೆಗೆ ಕಡಿವಾಣ ಹಾಕಿ 

ಕರಿದ ಆಹಾರಗಳು, ಜಂಕ್‌ಫುಡ್ ಅಥವಾ ಅತಿಯಾದ ಕೊಬ್ಬಿನಾಂಶ ಇರುವ ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ. ಇದು ನೋವನ್ನು ಹೆಚ್ಚು ಮಾಡಬಹದು 

ಚೀಸ್‌, ಐಸ್‌ಕ್ರೀಮ್‌ನಂತಹ ಡೇರಿ ಉತ್ಪನ್ನಗಳು ಕೂಡ ನೋವು ಹೆಚ್ಚಿಸುವ ಅರಾಚಿಡೋನಿಕ್ ಆಮ್ಲವನ್ನು ಹೊಂದಿರುತ್ತದೆ. ಇವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ 

ಸಿಹಿತಿಂಡಿಗಳು, ಕೃತಕ ಸಿಹಿ ಅಂಶ ಇರುವ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿ. ಇವು ಉರಿಯೂತವನ್ನು ಹೆಚ್ಚಿಸುತ್ತವೆ 

ಆಲ್ಕೋಹಾಲ್‌, ಧೂಮಪಾನ ಸೇವನೆ ಕೂಡ ನೋವನ್ನು ಹೆಚ್ಚಿಸಬಹುದು. ಇವು ರಕ್ತದ ಹರಿವಿನ ಮೇಲೆ ಪರಿಣಾಮ ಬೀರುವ ಮೂಲಕ ನೋವನ್ನು ಹೆಚ್ಚಿಸಬಹುದು 

ದೇಹವನ್ನು ನಿರ್ಜಲೀಕರಣಗೊಳ್ಳಲು ಬಿಡಬೇಡಿ. ಸಾಕಷ್ಟು ನೀರು ಕುಡಿಯುರಿ. ನೋವು ನಿವಾರಣೆಗೆ ಇಂಗನ್ನು ಉಗುರು ಬೆಚ್ಚಗಿನ ನೀರಿಗೆ ಮಿಶ್ರಣ ಮಾಡಿ ಅದನ್ನು ಕುಡಿಯಿರಿ 

ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಪಿಂಕ್ ಬಾಲ್ ಟೆಸ್ಟ್​ನಲ್ಲಿ ಟ್ರಾವಿಸ್ ಹೆಡ್ ವೇಗದ ಶತಕ