ಹಸಿಮೆಣಸಿಕಾಯಿಯಲ್ಲಿದೆ ಹತ್ತಾರು ಪೋಷಕಾಂಶ, ಇದರ ಪ್ರಯೋಜನ ತಿಳಿಯಿರಿ 

By Reshma
Aug 16, 2024

Hindustan Times
Kannada

ಹಸಿಮೆಣಸು ಸೇರಿಸುವುದರಿಂದ ಖಾರ ಸಿಗುವುದು ಮಾತ್ರವಲ್ಲ, ಆಹಾರ ಖಾದ್ಯಗಳ ರುಚಿಯೂ ಬದಲಾಗುತ್ತದೆ. ಆದರೆ ಈ ಹಸಿಮೆಣಸು ಪೋಷಕಾಂಶಗಳ ಆಗರವಾಗಿರುತ್ತದೆ. ಪ್ರತಿದಿನ ಹಸಿಮೆಣಸು ತಿನ್ನುವುದು ಆರೋಗ್ಯಕ್ಕೆ ಉತ್ತಮ. ಇದರಲ್ಲಿರುವ ಪ್ರಮುಖ ಪೋಷಕಾಂಶಗಳ ಬಗ್ಗೆ ತಿಳಿಯಿರಿ. 

ಹಸಿಮೆಣಸಿನಕಾಯಿಯಲ್ಲಿ ವಿಟಮಿನ್‌ ಸಿ ಅಧಿಕವಾಗಿದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಲು ಹಾಗೂ ಚರ್ಮದ ಆರೋಗ್ಯಕ್ಕೆ ಉತ್ತಮ. ಮೆಣಸಿನಕಾಯಿಯು ಮೂಳೆಯ ಬಲವನ್ನು ವರ್ಧಿಸುತ್ತದೆ

ಹಸಿಮೆಣಸಿನ ಕಾಯಿಯಲ್ಲಿ ವಿಟಮಿನ್‌ ಬಿ16 ಇದ್ದು, ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದು ಪ್ರತಿರಕ್ಷಣ ವ್ಯವಸ್ಥೆ ಸುಧಾರಣೆಗೂ ಒಳ್ಳೆಯದು.

ಹಸಿಮೆಣಸಿನಲ್ಲಿ ಕಬ್ಬಿಣಾಂಶವಿದೆ. ಇದು ಕೆಂಪುರಕ್ತಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ನೆನಪಿನ ಶಕ್ತಿ ಹೆಚ್ಚಲು ಕೂಡ ಹಸಿಮೆಣಸಿನ ಸೇವನೆ ಉತ್ತಮ. 

ಇದರಲ್ಲಿ ವಿಟಮಿನ್‌ ಕೆ ಇದೆ. ಇದು ಮೂಳೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತಪರಿಚಲನೆಯನ್ನೂ ಸುಧಾರಿಸುತ್ತದೆ 

ಹಸಿಮೆಣಸಿನಲ್ಲಿ ಮೆಗ್ನೇಶಿಯಂ ಹಾಗೂ ತಾಮ್ರದಂಶವಿದೆ. ಇದು ನಮ್ಮ ಒಟ್ಟಾರೆ ಆರೋಗ್ಯಕ್ಕೂ ಉತ್ತಮ. ಹಾಗಂತ ಇದನ್ನು ಅತಿಯಾಗಿ ತಿನ್ನುವುದು ಕೂಡ ಆರೋಗ್ಯಕ್ಕೆ ಉತ್ತಮ. 

ತೂಕ ಇಳಿಕೆಯಿಂದ ತ್ವಚೆಯ ಕಾಳಜಿಯವರೆಗೆ: ಮೊಳಕೆ ಕಾಳುಗಳ ಪ್ರಯೋಜನಗಳಿವು

pixel