ಮಳೆಗಾಲದಲ್ಲಿ ಪೇರಲೆ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ 

Pexels

By Reshma
Jul 09, 2024

Hindustan Times
Kannada

ಮಳೆಗಾಲದಲ್ಲಿ ಪೇರಳೆಹಣ್ಣು ಹೇರಳವಾಗಿ ಸಿಗುತ್ತದೆ. ಇದು ಹಲವರಿಗೆ ಇಷ್ಟವಾಗುತ್ತದೆ. ಮಧುಮೇಹಿಗಳಿಗೂ ಪೇರಲೆ ಹಣ್ಣು ಉತ್ತಮ. 

Pexels

ಪೇರಲೆ ಹಣ್ಣು ತಿನ್ನುವುದರಿಂದ ನಿಮಗೆ ನಂಬಲಾರದಷ್ಟು ಪ್ರಯೋಜನಗಳು ಸಿಗಲಿವೆ. ಪೋಷಕಾಂಶಗಳ ಉಗ್ರಾಣವಾಗಿರುವ ಪೇರಲೆಹಣ್ಣು ತಿನ್ನುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ. 

Pexels

ಇದರಲ್ಲಿರುವ ಖನಿಜಗಳು ಮತ್ತು ವಿಟಮಿನ್‌ಗಳು ದೇಹವನ್ನು ವಿವಿಧ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತವೆ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿ. 

Pexels

ಪೇರಲೆಯಲ್ಲಿ ಕಡಿಮೆ ಕ್ಯಾಲೋರಿ ಮತ್ತು ಸಾಕಷ್ಟು ನಾರಿನಾಂಶವಿದೆ. ಪೇರಲ ಹಣ್ಣು ಮಾತ್ರವಲ್ಲದೇ, ಅದರ ಎಲೆಗಳು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೂ ಸಹಕಾರಿ.

Pexels

ಮಧುಮೇಹಿಗಳಿಗೂ ಇದು ತುಂಬಾ ಒಳ್ಳೆಯದು. ಇದರಲ್ಲಿ ನಾರಿನಂಶ ಅಧಿಕವಾಗಿದೆ. ಇದು ತುಂಬಾ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಸಹ ಹೊಂದಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

Pexels

ಈ ಹಣ್ಣು ವಿಟಮಿನ್ ಸಿಯ ಉಗ್ರಾಣವಾಗಿದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಸುಕ್ಕುಗಳಿಂದ ರಕ್ಷಿಸುತ್ತದೆ.

Pexels

ವಿಟಮಿನ್‌ಗಳಿಂದ ಸಮೃದ್ಧವಾಗಿರುವ ಪೇರಲ ಮೆದುಳನ್ನು ಆರೋಗ್ಯವಾಗಿರಿಸುತ್ತದೆ. ಇದು ವಿಟಮಿನ್ ಬಿ 3 ಮತ್ತು ವಿಟಮಿನ್ ಬಿ 6 ಅನ್ನು ಹೊಂದಿರುತ್ತದೆ, ಇದು ಮೆದುಳಿಗೆ ರಕ್ತದ ಹರಿವನ್ನು ಹೆಚ್ಚಿಸಿ, ಒತ್ತಡ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.

Pexels

ಮಲಬದ್ಧತೆ ಸಮಸ್ಯೆಗೆ ಪೇರಲೆ ತುಂಬಾ ಉಪಯುಕ್ತವಾಗಿದೆ. ಇದು ಬಹಳಷ್ಟು ವಿಟಮಿನ್ ಎ ಅನ್ನು ಹೊಂದಿರುತ್ತದೆ, ಇದು ಕಣ್ಣಿನ ಆರೋಗ್ಯಕ್ಕೂ ಉತ್ತಮ. 

Pexels

ಕಂದು ಸೀರೆಯಲ್ಲಿ ಚಾಕೋಲೇಟ್‌ ಸುಂದರಿಯಾದ ಮೇಘಾ ಶೆಟ್ಟಿ