ಗೋಡಂಬಿಯನ್ನು ಹಾಲಿನಲ್ಲಿ ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಇಷ್ಟೆಲ್ಲಾ ಪ್ರಯೋಜನ
By Reshma
Nov 14, 2024
Hindustan Times
Kannada
ಒಣಹಣ್ಣುಗಳಲ್ಲಿ ಗೋಡಂಬಿಗೆ ವಿಶೇಷ ಮಹತ್ವವಿದೆ. ಇದು ಆರೋಗ್ಯಕ್ಕೆ ಬಹಳ ಉತ್ತಮ ಮತ್ತು ದುಬಾರಿ ಕೂಡ
ವಿಟಮಿನ್‌ಗಳು, ಖನಿಜಗಳು ಹಾಗೂ ಪ್ರೊಟೀನ್‌ಗಳಲ್ಲಿ ಸಮೃದ್ಧವಾಗಿರುವ ಗೋಡಂಬಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಬಹಳ ಉತ್ತಮ. ಇದು ಸಾಕಷ್ಟು ಪೌಷ್ಟಿಕಾಂಶಗಳನ್ನು ಹೊಂದಿರುತ್ತದೆ
ಗೋಡಂಬಿಯನ್ನು ಹಾಗೆ ತಿನ್ನುವುದಕ್ಕಿಂತ ಹಾಲಿನಲ್ಲಿ ನೆನೆಸಿ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ
ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಚಳಿಗಾಲದಲ್ಲಿ ತಪ್ಪದೇ ಗೋಡಂಬಿ ತಿನ್ನಬೇಕು. ಇದು ಉಷ್ಣ ಗುಣವನ್ನೂ ಹೊಂದಿದೆ
ತೂಕ ಹೆಚ್ಚಬೇಕು ಎನ್ನುವ ಬಯಕೆ ಇದ್ದರೆ ಹಾಲಿನಲ್ಲಿ ಗೋಡಂಬಿಯನ್ನು ನೆನೆಸಿ ತಿನ್ನಬೇಕು. ಇದು ಸಾಕಷ್ಟು ಕ್ಯಾಲೊರಿ ಹಾಗೂ ಕೊಬ್ಬಿನಾಂಶವನ್ನು ಹೊಂದಿರುತ್ತದೆ
ಮಲಬದ್ಧತೆ ಸಮಸ್ಯೆ ಇದ್ದರೆ ಹಾಲಿನಲ್ಲಿ ಗೋಡಂಬಿ ನೆನೆಸಿ ತಿನ್ನುವುದರಿಂದ ಪರಿಹಾರ ಕಂಡುಕೊಳ್ಳಬಹುದು
ಹಾಲಿನಲ್ಲಿ ಗೋಡಂಬಿಯನ್ನು ನೆನೆಸಿ ತಿನ್ನುವುದರಿಂದ ಚರ್ಮದ ಆರೋಗ್ಯ ಸುಧಾರಿಸುತ್ತದೆ. ಇದು ಫ್ರಿ ರ‍್ಯಾಡಿಕಲ್‌ಗಳಿಂದ ಚರ್ಮವನ್ನು ರಕ್ಷಿಸುತ್ತದೆ
ಹಾಲಿನಲ್ಲಿ ನೆನೆಸಿದ ಗೋಡಂಬಿ ತಿನ್ನುವುದರಿಂದ ದೇಹ ಹಾಗೂ ಸ್ನಾಯ ನೋವಿನಿಂದ ಪರಿಹಾರ ದೊರೆಯುತ್ತದೆ. ಇದು ಚಳಿಗಾಲದಲ್ಲಿ ಕೀಲುನೋವಿನ ಸಮಸ್ಯೆಯಿಂದ ಪರಿಹಾರ ನೀಡುತ್ತದೆ
ಹಾಲನ್ನು ಚೆನ್ನಾಗಿ ಕುದಿಸಿ. ಅದರಲ್ಲಿ 4 ರಿಂದ 5 ಗೋಡಂಬಿಯನ್ನು ರಾತ್ರಿಯಿಡಿ ನೆನೆಸಿ ಇಡಿ. ಬೆಳಿಗ್ಗೆ ಗೋಡಂಬಿ ತಿಂದು ಹಾಲು ಕುಡಿಯಿರಿ
ಪಿಂಕ್-ಬಾಲ್ ಟೆಸ್ಟ್‌ನಲ್ಲಿ ಭಾರತದ ದಾಖಲೆ ಹೀಗಿದೆ
AFP
ಮುಂದಿನ ಸ್ಟೋರಿ ಕ್ಲಿಕ್ ಮಾಡಿ