ಖರ್ಜೂರದ ಪ್ರಯೋಜನಗಳ ಜೊತೆ ಅಡ್ಡಪರಿಣಾಮಗಳನ್ನೂ ತಿಳಿಯಿರಿ
By Reshma
Dec 27, 2024
Hindustan Times
Kannada
ಖರ್ಜೂರ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚು ಬೆಳೆಯುವ, ಪ್ರಪಂಚದಾದ್ಯಂತ ಖ್ಯಾತಿ ಪಡೆದಿರುವ ಹಣ್ಣು. ಇದರಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ
ಇದರಲ್ಲಿ ನಾರಿನಾಂಶ, ಜೀವಸತ್ವಗಳು, ಖನಿಜಗಳು, ಪೊಟ್ಯಾಶಿಯಂ ಮತ್ತು ಮೆಗ್ನೀಶಿಯಂ ಸೇರಿದಂತೆ ಹಲವು ಪೋಷಕಾಂಶಗಳಿರುತ್ತವೆ
ಖರ್ಜೂರದ ಸೇವನೆಯಿಂದ ಶಕ್ತಿ ಮಟ್ಟ ಹೆಚ್ಚುತ್ತದೆ. ಇದು ಆಯಾಸವನ್ನೂ ಕಡಿಮೆ ಮಾಡುತ್ತದೆ
ಖರ್ಜೂರ ಹೃದಯದ ಆರೋಗ್ಯ ಸುಧಾರಿಸಿ, ರಕ್ತದೊತ್ತಡ ನಿವಾರಿಸಲು ಸಹಕಾರಿ
ಗರ್ಭಾವಸ್ಥೆಯಲ್ಲಿ ಖರ್ಜೂರ ತಿನ್ನುವುದರಿಂದ ಹೆರಿಗೆ ನೋವು ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ
ಇಷ್ಟೆಲ್ಲಾ ಪ್ರಯೋಜನಗಳಿರುವ ಖರ್ಜೂರವನ್ನು ಸಮತೋಲಿತ ಪ್ರಮಾಣದಲ್ಲಿ ತಿನ್ನುವುದು ಮುಖ್ಯವಾಗುತ್ತದೆ, ಇಲ್ಲದಿದ್ದರೆ ಅಪಾಯವೇ ಹೆಚ್ಚು
ಖರ್ಜೂರದಲ್ಲಿ ಕ್ಯಾಲೊರಿ ಪ್ರಮಾಣ ಅಧಿಕವಾಗಿದ್ದು, ಹೆಚ್ಚು ತಿನ್ನುವುದರಿಂದ ಬೊಜ್ಜು ಬರಬಹುದು
ಮಧುಮೇಹ ರೋಗಿಗಳು ಖರ್ಜೂರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು
ಪ್ರಕ್ಟೋಸ್ ಅಲರ್ಜಿ ಇರುವವರಿಗೆ ಇದು ತೊಂದರೆಯನ್ನು ಹೆಚ್ಚು ಮಾಡಬಹುದು
ದಿನಕ್ಕೆ 2 ರಿಂದ 3 ಖರ್ಜೂರ ತಿನ್ನಿ. ಅದಕ್ಕಿಂತ ಜಾಸ್ತಿ ತಿನ್ನಬೇಡಿ
ಈ ಬರಹ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.
ಭಾರತ vs ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ಸಾಧ್ಯವೇ?
ಮುಂದಿನ ಸ್ಟೋರಿ ಕ್ಲಿಕ್ ಮಾಡಿ