ಚಳಿಗಾಲದ ಆರೋಗ್ಯ ಸಮಸ್ಯೆಗಳಿಗೆ ಪರಿಣಾಮಕಾರಿ ಔಷಧ ತುಪ್ಪ  

By HT Kannada Desk
Dec 07, 2023

Hindustan Times
Kannada

ತುಪ್ಪಕ್ಕೆ ಆಯುರ್ವೇದದಲ್ಲಿ ಬಹಳ ಮಹತ್ವ ಇದೆ. ಚಳಿಗಾಲದಲ್ಲಿ ತುಪ್ಪ ಸೇವಿಸುವುದರಿಂದ ನಿಮ್ಮ ದೇಹವು ಬೆಚ್ಚಗಿರುತ್ತದೆ. 

ತುಪ್ಪದಲ್ಲಿರುವ ಆಂಟಿಆಕ್ಸಿಡೆಂಟ್‌, ಫ್ಯಾಟಿ ಆಸಿಡ್‌ ನಿಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ತುಪ್ಪದಲ್ಲಿರುವ ವಿಟಮಿನ್‌ ಎ,  ಡಿ, ಇ, ಕೆ ಅಂಶ ಚರ್ಮವನ್ನು ತೇವಾಂಶವಾಗಿರಿಸುತ್ತದೆ.

ತುಪ್ಪ ಸೇವಿಸುವುದರಿಂದ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕೀಲುನೋವಿನ ಸಮಸ್ಯೆಗೆ ಪರಿಹಾರ ನೀಡುತ್ತದೆ.

ಚಳಿಗಾಲದಲ್ಲಿ ನಿಮ್ಮ ಜೀರ್ಣಕ್ರಿಯೆ ಉತ್ತಮವಾಗಿರಲು ತುಪ್ಪ ಬಹಳ ಸಹಕಾರಿ. ಆದ್ದರಿಂದ ಆಹಾರದಲ್ಲಿ ಪ್ರತಿದಿನ ತುಪ್ಪ ಬಳಸಿ. 

ತುಪ್ಪದಲ್ಲಿರುವ ಆರೋಗ್ಯಕರ ಕೊಬ್ಬುಗಳು  ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. 

ಚಳಿಗಾಲದಲ್ಲಿ ತುಪ್ಪ ಸೇವನೆಯು ಆರೋಗ್ಯಕರ ತೂಕವನ್ನು ಉತ್ತೇಜಿಸುತ್ತದೆ

ತುಪ್ಪದಲ್ಲಿರುವ ಆಂಟಿ ಇಂಫ್ಲಾಮೇಟರಿ ಹಾಗೂ ಆಂಟಿ ಬ್ಯಾಕ್ಟೀರಿಯಲ್‌ ಲಕ್ಷಣಗಳು ಚಳಿಗಾಲದಲ್ಲಿ ನಿಮ್ಮನ್ನು ಶೀತ, ನೆಗಡಿ, ಕೆಮ್ಮಿನಿಂದ ಕಾಪಾಡುತ್ತದೆ.  

ಎಣ್ಣೆ ಬದಲಿಗೆ ಅಡುಗೆಗೆ ತುಪ್ಪ ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆ ಆಗುತ್ತದೆ. 

ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ