ಬೇಸಿಗೆಯಲ್ಲಿ ಬೆಲ್ಲ ತಿನ್ನುವುದರಿಂದಾಗುವ 7 ಪ್ರಯೋಜನಗಳು 

By Reshma
Apr 27, 2025

Hindustan Times
Kannada

ಬೆಲ್ಲದಲ್ಲಿ ಪ್ರೊಟೀನ್‌, ಫೈಬರ್‌, ಕಬ್ಬಿಣ, ಮೆಗ್ನೀಶಿಯಂ, ಅಗತ್ಯ ಜೀವಸತ್ವಗಳು, ಸತು, ಪೊಟ್ಯಾಶಿಯಂ ಮುಂತಾದ ಪೋಷಕಾಂಶಗಳು ಹೇರಳವಾಗಿರುತ್ತವೆ 

ಪ್ರತಿ ಋತುವಿನಲ್ಲೂ ಬೆಲ್ಲ ತಿನ್ನುವುದು ಉತ್ತಮ. ಅದರಲ್ಲೂ ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬೆಲ್ಲ ತಿನ್ನಬೇಕು. ಬೇಸಿಗೆಯಲ್ಲಿ ನಿಯಮಿತವಾಗಿ ಬೆಲ್ಲ ತಿನ್ನುವುದರಿಂದಾಗುವ ಪ್ರಯೋಜನಗಳು ಹೀಗಿವೆ 

ಬೆಲ್ಲದಲ್ಲಿ ನಾರಿನಾಂಶ ಹೇರಳವಾಗಿದ್ದು, ಇದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ 

ಸೀಮಿತ ಪ್ರಮಾಣದಲ್ಲಿ ಆಗಾಗ ಬೆಲ್ಲ ತಿನ್ನುವುದರಿಂದ ಜೀರ್ಣಕ್ರಿಯೆ ಆರೋಗ್ಯ ಸುಧಾರಿಸುತ್ತದೆ. ಇದರಿಂದ ತೂಕ ನಿರ್ವಹಣೆಯೂ ಸಾಧ್ಯವಾಗುತ್ತದೆ 

ಶೀತ ಕೆಮ್ಮು ಮತ್ತು ಗಂಟಲು ನೋವಿನ ಸಮಸ್ಯೆಯಿಂದ ನೀವು ತೊಂದರೆ ಎದುರಿಸುತ್ತಿದ್ದರೆ ಬೆಲ್ಲ ಸೇವಿಸಿ, ಇದರಿಂದ ಪರಿಹಾರ ಸಿಗುತ್ತದೆ 

ಪೊಟ್ಯಾಶಿಯಂ ಸೇರಿದಂತೆ ಇತರ ಖನಿಜನಗಳು ಬೆಲ್ಲದಲ್ಲಿ ಕಂಡು ಬರುತ್ತವೆ. ಇದು ಕೊಲೆಸ್ಟ್ರಾಲ್ ಮತ್ತು ಬಿಪಿಯನ್ನು ನಿಯಂತ್ರಿಸಲು ಹಾಗೂ ಹೃದಯದ ಆರೋಗ್ಯ ಸುಧಾರಿಸಲು ಬೆಲ್ಲ ಉತ್ತಮ 

ಬೇಸಿಗೆಯಲ್ಲಿ ಬೆಲ್ಲ ತಿನ್ನುವುದರಿಂದ ರೋಗಗಳ ವಿರುದ್ಧ ಹೋರಾಡುವ ದೇಹದ ಸಾಮರ್ಥ್ಯ  ವೃದ್ಧಿಯಾಗುತ್ತದೆ 

ಬೆಲ್ಲದಲ್ಲಿ ಹೇರಳವಾದ ಕಬ್ಬಿಣಾಂಶ ಇರುತ್ತದೆ. ಇದು ದೇಹದಲ್ಲಿ ರಕ್ತವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ 

ಬೆಲ್ಲದಲ್ಲಿ ಕ್ಯಾಲ್ಸಿಯಂ ಅಂಶ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಕೀಲುನೋವಿನ ಸಮಸ್ಯೆಯಿಂದ ಪರಿಹಾರ ನೀಡುತ್ತದೆ 

ಈ ಸುದ್ದಿ ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ 

ಸಂವಹನ ಕೌಶಲ್ಯ ಸುಧಾರಿಸಲು ಈ 5 ಅಪ್ಲಿಕೇಶನ್ ನಿಮಗೆ ನೆರವಾಗುತ್ತೆ

pexels