ಹುಣಸೆಹಣ್ಣಿನಿಂದ ದೇಹಕ್ಕಿದೆ ಇಷ್ಟೆಲ್ಲಾ ಪ್ರಯೋಜನ 

Pexels

By Reshma
Apr 04, 2024

Hindustan Times
Kannada

ಆರು ಬಗೆಯ ರುಚಿಗಳಲ್ಲಿ ಹುಳಿ ರುಚಿಯೂ ಒಂದು. ಆಹಾರ ಪದಾರ್ಥಗಳ ರುಚಿ ಹೆಚ್ಚಿಸುವ ಹುಣಸೆಹಣ್ಣಿನಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿಗೆ ಎಂಬುದು ಹಲವರಿಗೆ ತಿಳಿದಿಲ್ಲ. 

Pexels

ಹುಣಸೆಹಣ್ಣಿನಲ್ಲಿ ಟಾರ್ಟಾರಿಕ್ ಆಸಿಡ್, ಮ್ಯಾಲಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್‌ಗಳು ಸಮೃದ್ಧವಾಗಿದೆ. ಇದನ್ನು ನಮ್ಮ ಆಹಾರದೊಂದಿಗೆ ಸೇರಿಸುವುದರಿಂದ ದೇಹದಲ್ಲಿನ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ.

Pexels

ಹುಣಸೆ ಹಣ್ಣಿನಲ್ಲಿ ನಾರಿನಂಶ ಅಧಿಕವಾಗಿದೆ. ಇದರಲ್ಲಿ ಕೊಬ್ಬಿನಂಶವೂ ಕಡಿಮೆ. ಹೀಗಾಗಿ ದೇಹ ತೂಕ ಇಳಿಕೆಗೂ ಸಹಕಾರಿ. 

Pexels

ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

pixa bay

ಹುಣಸೆಹಣ್ಣನ್ನು ಆಹಾರದೊಂದಿಗೆ ಸೇರಿಸುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ. ಇದು ಸಕ್ಕರೆದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.

pixa bay

ಹುಣಸೆ ಹಣ್ಣಿನಲ್ಲಿರುವ ಸಂಯುಕ್ತಗಳು ಹೃದಯ ಆರೋಗ್ಯ ಸುಧಾರಣೆಗೂ ಸಹಕಾರಿ.

pixa bay

ಹುಣಸೆಹಣ್ಣನ್ನು ಆಹಾರದಲ್ಲಿ ಸೇರಿಸುವುದರಿಂದ ಕ್ಯಾನ್ಸರ್ ಸಂಬಂಧಿತ ಗೆಡ್ಡೆಗಳ ರಚನೆಯನ್ನು ತಡೆಯಬಹುದು. ಇದು ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

pixa bay

ಹುಣಸೆಹಣ್ಣಿನಿಂದ ತಯಾರಿಸಿದ ಆಹಾರ ಸೇವನೆಯಿಂದ ಕೆಮ್ಮು, ನೆಗಡಿ, ದಮ್ಮು ಕಡಿಮೆಯಾಗುತ್ತದೆ.

pixa bay

ಇಷ್ಟೇ ಅಲ್ಲದೇ ಹುಣಸೆಹಣ್ಣು ಸೌಂದರ್ಯವರ್ದಕವೂ ಹೌದು. ಇದು ತ್ವಚೆಯ ಹೊಳಪು ಹೆಚ್ಚುವಂತೆ ಮಾಡುತ್ತದೆ. 

pixa bay

ಮಾಸ್ಟರ್‌ ಕಿಶನ್‌ ಈಗ ಹೇಗಿದ್ದಾರೆ ನೋಡಿ?