ರಾತ್ರಿ ಹೊತ್ತು ಜೀರ್ಣಕ್ರಿಯೆ ಸರಿಯಾಗಿ ಆಗದ ಕಾರಣ ಕಡಿಮೆ ತಿನ್ನಬೇಕು ಎನ್ನುತ್ತಾರೆ. ಆದರೆ ಈ ಕೆಲವು ಆಹಾರಗಳನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಾಧ್ಯವಿದೆ.
PEXELS
ರಾತ್ರಿಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ಕೆಲವು ಆಹಾರಗಳ ಬಗ್ಗೆ ಇಲ್ಲಿದೆ ಮಾಹಿತಿ
PEXELS
ಗ್ರೀಕ್ ಮೊಸರು: ಗ್ರೀಕ್ ಮೊಸರು ಕರುಳಿನ ಆರೋಗ್ಯಕ್ಕೆ ಪ್ರೋಬಯಾಟಿಕ್‌ಗಳು ಮತ್ತು ಪ್ರೊಟೀನ್‌ಗಳನ್ನು ಒದಗಿಸುತ್ತದೆ. ಸಕ್ಕರೆಯನ್ನು ಸೇರಿಸದೆ ಪೌಷ್ಟಿಕ ಆಹಾರಕ್ಕಾಗಿ ಇದನ್ನು ಓಟ್ಸ್ ಮತ್ತು ಹಣ್ಣಿನೊಂದಿಗೆ ಬೆರೆಸಿ ತಿನ್ನಿ
PEXELS
ಕಿಮ್ಚಿ: ಇದು ಪ್ರೋಬಯಾಟಿಕ್‌ಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದರ ಸೇವನೆಯಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಕ್ಯಾನ್ಸರ್ ತಡೆಯಲು ಇದು ಸಹಕಾರಿ
PEXELS
ಕೆಫೀರ್: ಕೆಫೀರ್ ಹಾಲಿನಿಂದ ತಯಾರಿಸಿದ ಹುದುಗಿಸಿದ ಆಹಾರ. ಇದು ಕರುಳಿನ ಆರೋಗ್ಯ ಸುಧಾರಿಸುತ್ತದೆ. ಉರಿಯೂತ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದ
PEXELS
ಬೆಳ್ಳುಳ್ಳಿ: ಬೆಳ್ಳುಳ್ಳಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಮಾತ್ರವಲ್ಲ ಇದು ಕರುಳಿನ ಆರೋಗ್ಯ ಸುಧಾರಿಸಲು ನೆರವಾಗುತ್ತದೆ
PEXELS
ಚಿಯಾ ಬೀಜಗಳು: ನಾರಿನಾಂಶ ಮತ್ತು ಒಮೆಗಾ -3ಗಳಿಂದ ತುಂಬಿರುವ ಚಿಯಾ ಬೀಜಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ
PEXELS
ಅಣಬೆಗಳಲ್ಲಿ ಪ್ರಿಬಯಾಟಿಕ್ ಫೈಬರ್ ಮತ್ತು ಕೆಲವು ಸಂಯುಕ್ತಗಳು ಸಮೃದ್ಧವಾಗಿವೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಸುಧಾರಿಸಲು ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ