ಪ್ರತಿದಿನ ಸೋರೆಕಾಯಿ ಜ್ಯೂಸ್‌ ಕುಡಿಯುವುದರಿಂದ ದೇಹಕ್ಕಾಗುವ 7 ಅದ್ಭುತ ಪ್ರಯೋಜನಗಳಿವು

By Reshma
May 29, 2024

Hindustan Times
Kannada

ಕ್ಯಾಲೋರಿ, ಪ್ರೊಟೀನ್‌, ಕೊಬ್ಬಿನಾಂಶ, ಕಾರ್ಬೋಹೈಡ್ರೇಟ್‌, ನಾರಿನಾಂಶ, ಕ್ಯಾಲ್ಸಿಯಂ, ರಂಜಕ, ಸತು ಮುಂತಾದ ಹಲವು ಪೋಷಕಾಂಶಗಳನ್ನು ಹೊಂದಿರುವ ತರಕಾರಿ ಸೋರೆಕಾಯಿ. ಇದರ ರಸ ಸೇವನೆಯಿಂದ  ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. 

ಹಾಗಾದರೆ ಪ್ರತಿದಿನ ಸೋರೆಕಾಯಿ ಜ್ಯೂಸ್‌ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡಿ. 

ಪ್ರತಿದಿನ ಸೋರೆಕಾಯಿ ಜ್ಯೂಸ್‌ ಕುಡಿಯುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಿಸಬಹುದು. ಜೊತೆಗೆ ಇದರಿಂದ ರಕ್ತದೊತ್ತಡವು ನಿಯಂತ್ರಣಕ್ಕೆ ಬರುತ್ತದೆ. 

ಸೋರೆಕಾಯಿ ರಸದಲ್ಲಿ ವಿಟಮಿನ್‌ ಸಿ ಸಮೃದ್ಧವಾಗಿರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹವನ್ನು ರೋಗಗಳಿಂದ ರಕ್ಷಿಸಲು ಇದು ಬೆಸ್ಟ್‌. 

ಸೋರೆಕಾಯಿ ರಸದಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದನ್ನು ನಿರಂತರವಾಗಿ ಸೇವಿಸುವುದರಿಂದ ಅರ್ಜೀರ್ಣ, ವಾಂತಿ, ಭೇದಿ ಮುಂತಾದ ಜೀರ್ಣಕಾರಿ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. 

ಸೋರೆಕಾಯಿ ರಸದಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ತ್ವಚೆಯ ಹೊಳಪು ಹೆಚ್ಚಬೇಕು ಎಂದರೆ ನಿರಂತರವಾಗಿ ಸೋರೆಕಾಯಿ ರಸ ಸೇವಿಸಿ. 

ಸೋರೆಕಾಯಿ ರಸದಲ್ಲಿ ನಾರಿನಾಂಶ ಸಮೃದ್ಧವಾಗಿದ್ದು, ಕಡಿಮೆ ಕೊಬ್ಬಿನಾಂಶವಿರುತ್ತದೆ. ನೀವು ಪ್ರತಿನಿತ್ಯ ಸೋರೆಕಾಯಿ ರಸ ಸೇವಿಸುವುದರಿಂದ ತೂಕ ಇಳಿಕೆಗೂ ಸಹಕಾರಿ. ಇದು ದೀರ್ಘಕಾಲ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ. 

ಸೋರೆಕಾಯಿಯಲ್ಲಿ ಕೋಲಿನ್‌ ಅಂಶವಿದ್ದು ಇದು ನರಗಳನ್ನು ಶಾಂತಗೊಳಿಸುತ್ತದೆ. ಪ್ರತಿದಿನ ಸೋರೆಕಾಯಿ ರಸ ಕುಡಿಯುವುದರಿಂದ ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. 

ರಕ್ತದಲ್ಲಿನ ಸಕ್ಕರೆಯಂಶ ಏರಿಕೆಯಾಗುವುದನ್ನು ತಡೆಯಲೂ ಸೋರೆಕಾಯಿ ಉತ್ತಮ. ಇದರಿಂದ ನೀರಿನಾಂಶವೂ ಹೆಚ್ಚಿರುತ್ತದೆ. ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದ್ದು. 

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ. 

ರಶ್ಮಿಕಾ ಮಂದಣ್ಣರ ಹೊಸ ಕ್ಯೂಟ್‌ ಫೋಟೋಗಳು ವೈರಲ್‌

AFP