ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುವ 5 ಆಹಾರಗಳಿವು
PEXELS, MEDICAL NEWS TODAY
By Priyanka Gowda May 24, 2025
Hindustan Times Kannada
ಅಧಿಕ ರಕ್ತದೊತ್ತಡವು ಹೃದ್ರೋಗ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಇದಕ್ಕಾಗಿ, ಜೀವನಶೈಲಿ ಬದಲಾವಣೆಗಳೊಂದಿಗೆ ಕೆಲವು ಆಹಾರಗಳನ್ನು ತೆಗೆದುಕೊಳ್ಳುವುದು ಸೂಕ್ತ.
PEXELS
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವ 5 ಆಹಾರಗಳು ಇಲ್ಲಿವೆ. ಅವು ಯಾವುವು ಎಂಬುದು ಇಲ್ಲಿದೆ.
PEXELS
ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಬೆರ್ರಿ ಹಣ್ಣುಗಳು ಪ್ರಮುಖ ಪಾತ್ರವಹಿಸುತ್ತವೆ. ಇವುಗಳನ್ನು ಸ್ಮೂಥಿಗಳಲ್ಲಿ ಅಥವಾ ಓಟ್ ಮೀಲ್‍ಗಳಲ್ಲಿ ಬೆರೆಸಿ ಸೇವಿಸಬಹುದು.
PEXELS
ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಸಮೃದ್ಧವಾಗಿದೆ. ಇದು ಸೋಡಿಯಂ ವಿರುದ್ಧ ಹೋರಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
PEXELS
ನೈಟ್ರೇಟ್ ಸಮೃದ್ಧವಾಗಿರುವ ಬೀಟ್ರೂಟ್ ರಸವು ಅಧಿಕ ರಕ್ತದೊತ್ತಡ ಹೊಂದಿರುವ ಜನರಲ್ಲಿ ಸಿಸ್ಟೋಲಿಕ್ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
PEXELS
ಡಾರ್ಕ್ ಚಾಕೊಲೇಟ್ ಕೋಕೋ ಫ್ಲೇವನಾಯ್ಡ್‌ಗಳನ್ನು ಹೊಂದಿರುತ್ತದೆ. ಅವು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗಂತ ಅತಿಯಾಗಿ ತಿನ್ನಬಾರದು.
PEXELS
ಏಳು ವಾರಗಳವರೆಗೆ ಪ್ರತಿದಿನ ಎರಡು ಕಿವಿ ಹಣ್ಣು ತಿನ್ನುವುದರಿಂದ ಪ್ರಯೋಜನ ಪಡೆಯಬಹುದು. ಇದು ವಿಟಮಿನ್ ಸಿ ಯನ್ನು ಸಹ ಒದಗಿಸುತ್ತದೆ.
PEXELS
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.