ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
By Reshma
Nov 29, 2024
Hindustan Times
Kannada
ಕೆಮ್ಮು ಒಂದು ಸಾಮಾನ್ಯ ಸಮಸ್ಯೆ. ಇದು ಎಲ್ಲಾ ಋತುವಿನಲ್ಲೂ ಕಾಡುತ್ತದೆ. ಚಳಿಗಾಲದಲ್ಲಿ ಕೆಮ್ಮಿನ ಸಮಸ್ಯೆ ಹೆಚ್ಚಾಗಬಹುದು
ಕೆಲವೊಮ್ಮೆ ಕೆಮ್ಮು ಬಿಡದೇ ಕಾಡುತ್ತದೆ. ಔಷಧಿ ತಿಂದರೂ ಗುಣವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಮನೆಮದ್ದನ್ನು ಪ್ರಯತ್ನಿಸಬೇಕು
Canva
ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಬಾಯಿ ಮುಕ್ಕಳಿಸುವುದು ಕೆಮ್ಮಿನ ಸಮಸ್ಯೆಗೆ ಪರಿಹಾರ ನೀಡುತ್ತದೆ
ಪುದಿನಾ ಟೀ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಕೆಮ್ಮಿಗೆ ನೈಸರ್ಗಿಕ ಪರಿಹಾರವಾಗಿದೆ
ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಿರಿ. ಒಣಶುಂಠಿ ಪುಡಿ ಕೂಡ ಬಳಸಬಹುದು
ಹಬೆ ತೆಗೆದುಕೊಳ್ಳುವುದು ಕೆಮ್ಮಿಗೆ ಉತ್ತಮ ಪರಿಹಾರ. ಇದರಿಂದ ಮೂಗು ಹಾಗೂ ಗಂಟಲಿನ ಕೊಳವೆ ತೆರೆಯುತ್ತದೆ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ
ಅರಿಸಿನದ ಗುಣಲಕ್ಷಣಗಳು ಕೆಮ್ಮಿಗೆ ಪರಿಹಾರ ನೀಡುತ್ತವೆ. ರಾತ್ರಿ ಮಲಗುವ ಮೊದಲು ಬಿಸಿ ಹಾಲಿಗೆ ಅರಿಸಿನ ಬೆರೆಸಿ ಕುಡಿಯಿರಿ
ತುಳಸಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಿ. ತುಳಸಿ ಎಲೆಗಳನ್ನು ನೀರಿಗೆ ಸೇರಿಸಿ ಕುದಿಸಿ ಕೂಡ ಕುಡಿಯಬಹುದು
ಈ ಮನೆಮದ್ದುಗಳಿಂದ ದೀರ್ಘಕಾಲದ ಕೆಮ್ಮಿಗೆ ಪರಿಹಾರ ಸಿಗುತ್ತದೆಯಾದರೂ ಕೆಮ್ಮು ನಿರಂತರವಾಗಿ ಮುಂದುವರಿದರೆ ಸೂಕ್ತ ವೈದ್ಯರಿಗೆ ತೋರಿಸುವುದು ಉತ್ತಮ
ವಿಶೇಷ ರೀತಿಯ ಚಾಕೋಲೇಟ್ ತಿಂದ ರಿಷಭ್ ಪಂತ್ ಗೆಳತಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ