ದಿನಕ್ಕೆ ಎಷ್ಟು ಬಾರಿ ಅನ್ನ ತಿಂದರೆ ಆರೋಗ್ಯಕ್ಕೆ ಒಳ್ಳೆಯದು

By Raghavendra M Y
Oct 06, 2024

Hindustan Times
Kannada

ಬೇಳೆ, ತರಕಾರಿ ಸಾಂಬರ್‌ನೊಂದಿಗೆ ಎಲ್ಲರೂ ಅನ್ನವನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಇತ್ತೀಚೆಗೆ ಕೆಲವರು ಆರೋಗ್ಯದ ಕಾರಣದಿಂದ ಅನ್ನವನ್ನು ಮಿತಗೊಳಿಸಿದ್ದಾರೆ

ಪೊಟ್ಯಾಸಿಯಮ್ ಜೀವಸತ್ವಗಳಂತಹ ಅನೇಕ ಅಂಶಗಳು ಅಕ್ಕಿಯಲ್ಲಿವೆ. ಇದು ಪ್ರಯೋಜನಕಾರಿಯಾಗಿದ್ದರೂ ಅನ್ನವನ್ನು ಮಿತವಾಗಿ ಸೇವಿಸಲಾಗುತ್ತದೆ

ಹೆಚ್ಚು ಅನ್ನವನ್ನು ತಿನ್ನುವುದರಿಂದ ಸಕ್ಕರೆಯ ಮಟ್ಟವು ಹೆಚ್ಚಾಗುತ್ತದೆ ಮತ್ತು ದೇಹದಲ್ಲಿ ಅನೇಕ ರೋಗಗಳು ಉಂಟಾಗುವ ಸಾಧ್ಯತೆ ಇರುತ್ತದೆ

ಗುರುಗ್ರಾಮದ ಮ್ಯಾಕ್ಸ್ ಆಸ್ಪತ್ರೆಯ ಪೌಷ್ಟಿಕ ತಜ್ಞ ಮತ್ತು ಸಲಹೆಗಾರ್ತಿ ಡಾ ಮಂಜರಿ ಚಂದ್ರು ಅವರು ಅನ್ನ ಮತ್ತು ಆರೋಗ್ಯದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ

ನೀವು ಬಿಳಿ ಅಕ್ಕಿಯ ಅನ್ನವನ್ನು ತಿನ್ನುತಿದ್ದರೆ ದೇಹದಲ್ಲಿ ಸಕ್ಕರೆಯ ಅಂಸ ಹೆಚ್ಚಾಗಬಹುದು. ಇದು ಮಧುಮೇಹ ರೋಗಿಗಳಿಗೆ ದೊಡ್ಡ ಹಾನಿ ಮಾಡುತ್ತದೆ

ಹೆಚ್ಚು ಅನ್ನ ತಿನ್ನುವುದರಿಂದ ಬೊಜ್ಜು ಹೆಚ್ಚಾಗುತ್ತದೆ. ಅನ್ನದಲ್ಲಿರುವ ಅಂಶಗಳು ದೇಹವನ್ನು ಹಿಗ್ಗಿಸುತ್ತವೆ. ಇದು ತ್ವರಿತ ತೂಕಕ್ಕೂ ಕಾರಣವಾಗುತ್ತೆ

ಡಾ ಮಂಜರಿ ಚಂದ್ರ ಅವರ ಪ್ರಕಾರ, ನೀವು ಬಿಳಿ ಅನ್ನವನ್ನು ತಿನ್ನುತ್ತಿದ್ದರೆ ದಿನಕ್ಕೆ ಒಮ್ಮೆ ಮಾತ್ರ ತಿನ್ನಿ. ಇದರಿಂದ ಯಾವುದೇ ಹಾನಿ ಇರುವುದಿಲ್ಲ

ಬಿಳಿ ಅಕ್ಕಿಗಿಂತ ಕೆಂಪು ಅಕ್ಕಿಯಲ್ಲಿ ಹೆಚ್ಚಿನ ಪೋಷಕಾಂಶಗಳಿವೆ ಎಂದು ತಜ್ಞರು ಹೇಳುತ್ತಾರೆ. ಈ ಅಕ್ಕಿ ಮಧುಮೇಹ ರೋಗಿಗಳಿಗೆ ಒಳ್ಳೆಯದು

ದಿನಕ್ಕೆ ಎರಡು ಬಾರಿ ಅನ್ನ ತಿಂದರೆ ಸ್ಟೀಮ್ ರೈಸ್ ತಿನ್ನಿ. ಅಕ್ಕಿಯನ್ನು ಚೆನ್ನಾಗಿ ಬೇಯಿಸಬೇಕು. ಇದು ಪಿಷ್ಟವನ್ನು ತೆಗೆದುಹಾಕುತ್ತದೆ, ಇದರಿಂದ ಯಾವುದೇ ಹಾನಿಯಾಗಲ್ಲ

ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಯಾವುದೇ ನಿರ್ದಿಷ್ಟ ಮಾಹಿತಿಗಾಗಿ ಆರೋಗ್ಯ ತಜ್ಞರಿಂದ ಸೂಕ್ತ ಸಲಹೆ ಪಡೆಯಿರಿ

ಅಶ್ವಿನ್ ಸೇರಿ ವಿದಾಯ ಪಂದ್ಯವಾಡದ ಭಾರತದ ದಿಗ್ಗಜ ಕ್ರಿಕೆಟಿಗರು