ಗಾಢವಾಗಿ ನಿದ್ರಿಸಲು ಸಹಾಯ ಮಾಡುವ ಅತ್ಯುತ್ತಮ ಆಹಾರಗಳಿವು
pixa bay
By Priyanka Gowda
Sep 04, 2024
Hindustan Times
Kannada
ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯು ದೊಡ್ಡ ಸಮಸ್ಯೆಯಾಗಿದೆ. ಈ ಆಹಾರಗಳ ಸೇವನೆಯಿಂದ ಉತ್ತಮ ನಿದ್ದೆ ಪಡೆಯಲು ಸಹಾಯಕವಾಗಬಹುದು
pixa bay
ಬಾಳೆಹಣ್ಣುಗಳಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಶಿಯಮ್‍ನ ಉತ್ತಮ ಮೂಲವಾಗಿದೆ. ಇದು ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ.
pixa bay
ಬೆಚ್ಚಗಿನ ಹಾಲು ಟ್ರಿಪ್ಟೊಫಾನ್ ಮತ್ತು ಮೆಲಟೋನಿನ್ ಅಂಶ ಹೊಂದಿದ್ದು, ಮಲಗುವ ಮುನ್ನ ಇದರ ಸೇವನೆಯಿಂದ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.
pixa bay
ಓಟ್ಸ್ ಮೆಲಟೋನಿನ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ. ಇದರ ಸೇವನೆಯಿಂದ ಗಾಢವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.
pixa bay
ಚೆರ್ರಿ ಹಣ್ಣು ನಿದ್ದೆಯನ್ನು ನಿಯಂತ್ರಿಸುವ ಹಾರ್ಮೋನ್ ಮೆಲಟೋನಿನ್‍ನಿಂದ ಸಮೃದ್ಧವಾಗಿದೆ. ಇವು ನಿದ್ದೆಯ ಅವಧಿ ಮತ್ತು ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
pixa bay
ಬಾದಾಮಿಯಲ್ಲಿರುವ ಮೆಗ್ನೀಸಿಯಮ್ ಸ್ನಾಯುಗಳನ್ನು ವಿಶ್ರಾಂತಿ ಮಾಡಲು ಮತ್ತು ನಿದ್ದೆಗೆ ಸಹಕಾರಿಯಾಗಿದೆ.
freepik
ಕಿವಿ ಹಣ್ಣುಗಳಲ್ಲಿ ಉತ್ಕರ್ಷಣ ನಿರೋಧಕಗಳು ಮತ್ತು ಸಿರೊಟೋನಿನ್‌ನಿಂದ ಸಮೃದ್ಧವಾಗಿದೆ. ಇದು ನಿದ್ದೆಯ ಮಾದರಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
freepik
ಸಾಲ್ಮನ್, ಮ್ಯಾಕೆರೆಲ್ ಮತ್ತು ಸಾರ್ಡೀನ್ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲ ಮತ್ತು ವಿಟಮಿನ್ ಡಿ ಅಧಿಕವಾಗಿದೆ. ಇವೂ ನಿದ್ದೆಯ ಗುಣಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿ.
freepik
ಮೊಸರು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಮೊಸರನ್ನು ಸೇವಿಸುವುದರಿಂದಲೂ ಗಾಢವಾಗಿ ನಿದ್ರಿಸಬಹುದು.
freepik
ಸಹ ಕಲಾವಿದನಿಗೆ ವೇದಿಕೆ ಮೇಲೆಯೇ ಪ್ರೇಮ ನಿವೇದನೆ ಮಾಡಿದ ಬ್ರಹ್ಮಗಂಟು ಸೀರಿಯಲ್ ಸಂಜನಾ ಪಾತ್ರಧಾರಿ ಆರತಿ
ಮುಂದಿನ ಸ್ಟೋರಿ ಕ್ಲಿಕ್ ಮಾಡಿ