ಡೆಂಗ್ಯೂ ಬಾರದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಹೇಗೆ?
By Raghavendra M Y Jun 29, 2024
Hindustan Times Kannada
ಸೊಳ್ಳೆಗಳ ಕಡಿತದಿಂದ ಡೆಂಗ್ಯೂ ಬರುತ್ತದೆ. ಕೀಲು, ಸ್ನಾಯು ನೋವು, ಕಣ್ಣುಗಳ ಹಿಂದೆ ನೋವು, ವಾಕರಿಕೆ, ವಾಂತಿ, ತೀವ್ರ ತಲೆನೋವು ರೋಗದ ಲಕ್ಷಣಗಳಾಗಿವೆ
ಡೆಂಗ್ಯೂ ಬಾರದಂತೆ ಹೇಗೆ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿಯೋಣ
ಟೈರ್, ಪ್ಲಾಸ್ಟಿಕ್ ಕವರ್, ಹೂವಿನ ಕುಂಡ, ಸಾಕುಪ್ರಾಣಿಗಳ ನೀರಿನ ಬಟ್ಟಲು ಮುಂತಾದ ವಸ್ತುಗಳಲ್ಲಿನ ನಿಂತ ನೀರಿನಲ್ಲಿ ಸೊಳ್ಳೆಗಳು ಬೆಳೆಯುತ್ತವೆ. ಈ ವಸ್ತುಗಳ ಬಗ್ಗೆ ಕ್ರಮ ಕೈಗೊಳ್ಳಿ
ಸೊಳ್ಳೆ ಸೇರಿದಂತೆ ಯಾವುದೇ ರೀತಿಯ ಕೀಟಗಳು ಮನೆಯೂಳಗೆ ಬಾರದಂತೆ ಮನೆ ಬಾಗಿಲು, ಕಿಟಕಿಗಳಿಗೆ ಪರದೆಗಳನ್ನು ಅಳವಡಿಸಿ, ರಂಧ್ರಗಳು ಇಲ್ಲದಿರುವುದನ್ನ ಖಚಿತಪಡಿಸಿಕೊಳ್ಳಿ
ಸೊಳ್ಳೆ ನಿವಾರಕಗಳನ್ನು ಬಳಸಿ. ಜನಸಂದಣಿ ಅಥವಾ ಮನೆಯಲ್ಲಿ ಇರುವಾಗ ದೇಹಕ್ಕೆ ಸೊಳ್ಳೆ ನಿವಾರಕ ಕ್ರೀಮ್‌ಗಳನ್ನು ಹಚ್ಚಿಕೊಳ್ಳಿ. ಮಕ್ಕಳ ರಕ್ಷಣೆಗೆ ಸೊಳ್ಳೆ ಪರದೆಗಳನ್ನು ಬಳಸಿ
ಸೊಳ್ಳೆಗಳು ಕಚ್ಚುವುದನ್ನು ತಪ್ಪಿಸಲು ಉದ್ದನೆಯ ತೋಳಿನ ಬಟ್ಟೆಗಳು, ಸಾಕ್ಸ್, ಮುಚ್ಚಿದ ಬೂಟುಗಳು, ಫುಲ್ ಪ್ಯಾಂಟ್‌ಗಳನ್ನು ಧರಿಸಿ
ಸೊಳ್ಳೆ ಪರದೆಯ ಅಡಿಯಲ್ಲಿ ಮಲಗುವುದು ನಿಮಗೆ, ನಿಮ್ಮ ಮಕ್ಕಳಿಗೆ ಸೊಳ್ಳೆಗಳಿಂದ ಕಚ್ಚುವುದರಿಂದ ರಕ್ಷಣೆ ಪಡೆಯಿರಿ
ಮನೆ ಸುತ್ತಮುತ್ತ ಅಥವಾ ನೀವು ಇರುವ ಪ್ರದೇಶದಲ್ಲಿ ಮಳೆ ನೀರು ಅಥವಾ ಚರಂಡಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಮನೆ ಹೊರಗಡೆಯ ವಸ್ತುಗಳನ್ನು ನೀರು ನಿಲ್ಲದಂತೆ ಕ್ರಮಕೈಗೊಳ್ಳಿ
ಪ್ರವಾಸದ ವೇಳೆ ನೀವು ಮಾಡುವ ಕ್ಯಾಂಪ್‌ಗಳಲ್ಲಿ ಸೊಳ್ಳೆಗಳು ಕಡಿಯದಂತೆ ಕ್ರೀಮ್, ನೆಟೆಡ್ ಸ್ಲೀಪಿಂಗ್ ಬ್ಯಾಗ್ ಸೇರಿದಂತೆ ಎಲ್ಲಾ ರೀತಿಯ ಸೊಳ್ಳೆ ನಿವಾರಕಗಳೊಂದಿಗೆ ಪ್ರವಾಸ ಕೈಗೊಳ್ಳಿ