ಹಲ್ಲುಗಳಲ್ಲಿರುವ ಹಳದಿ ಕಲೆ ತೆಗೆಯಲು ನಿಂಬೆಯನ್ನು ಈ ರೀತಿ ಬಳಸಿ

By Priyanka Gowda
May 23, 2025

Hindustan Times
Kannada

ಹಲ್ಲು ಬಿಳಿಯಾಗಿದ್ದರೆ ನೋಡಲು ಚಂದ. ಆದರೆ, ಹಲ್ಲುಗಳು ಹಳದಿ ಬಣ್ಣದಲ್ಲಿದ್ದರೆ ಮುಜುಗರ ಎದುರಿಸಬೇಕಾದೀತು. ಹೀಗಾಗಿ ಪ್ರತಿಯೊಬ್ಬರೂ ತಮ್ಮ ಹಲ್ಲುಗಳ ಮೇಲಿನ ಹಳದಿ ಬಣ್ಣವನ್ನು ತೊಡೆದುಹಾಕಲು ಪ್ರಯತ್ನಿಸಬೇಕು.

ಅನೇಕ ಜನರು ಹಳದಿ ಹಲ್ಲುಗಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಸಾರ್ವಜನಿಕವಾಗಿ ನಗಲು ಹಿಂಜರಿಯುತ್ತಾರೆ. 

ಹಳದಿ ಹಲ್ಲು ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಿಂಬೆ ಉತ್ತಮ ಮನೆಮದ್ದು. 

ಹಲ್ಲುಗಳ ಹಳದಿ ಬಣ್ಣವನ್ನು ತೆಗೆದುಹಾಕುವಲ್ಲಿ ನಿಂಬೆ ಎಷ್ಟು ಪರಿಣಾಮಕಾರಿ ಎಂದು ತಿಳಿದರೆ ಆಶ್ಚರ್ಯವಾಗಬಹುದು. ನಿಂಬೆಯಲ್ಲಿ ಸಿಟ್ರಿಕ್ ಆಮ್ಲ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿವೆ.  

ನಿಂಬೆಗೆ ಬ್ಯಾಕ್ಟೀರಿಯಾವನ್ನು ಕೊಲ್ಲುವ ಶಕ್ತಿ ಇದೆ. ಇದು ಕೊಳೆಯನ್ನು ಸಹ ತೆಗೆದುಹಾಕುತ್ತದೆ. ನಿಂಬೆಯನ್ನು ಬಳಸಿ ಹಲ್ಲುಗಳಿಂದ ಹಳದಿ ಕಲೆಗಳನ್ನು ತೆಗೆದುಹಾಕಬಹುದು. 

ಒಂದು ಸಣ್ಣ ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ನಿಂಬೆ ರಸವನ್ನು ಸೇರಿಸಿ. ಅದೇ ಬಟ್ಟಲಿನಲ್ಲಿ ಒಂದು ಚಿಟಿಕೆ ಉಪ್ಪು ಮತ್ತು ಅರ್ಧ ಚಮಚ ಎಣ್ಣೆಯನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, ಸ್ವಲ್ಪ ಸಮಯದವರೆಗೆ ಪಕ್ಕಕ್ಕೆ ಇರಿಸಿ ನಂತರ ಬಳಸಿ.

ಈ ಮಿಶ್ರಣದಿಂದ ಪ್ರತಿದಿನ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಇದನ್ನು ಎರಡರಿಂದ ಮೂರು ವಾರಗಳ ಕಾಲ ಮಾಡಿ. 

ಇಲ್ಲಿ ತಿಳಿಸಿರುವ ನಿಂಬೆ ಹಣ್ಣಿನ ಟಿಪ್ಸ್‌ನಿಂದ ಕೆಲವೇ ವಾರಗಳಲ್ಲಿ ನಿಮ್ಮ ಹಲ್ಲುಗಳು ಬಿಳಿಯಾಗುತ್ತವೆ. ನಿಮ್ಮ ಹಳದಿ ಹಲ್ಲುಗಳ ಬಗ್ಗೆ ನೀವು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ. ನೀವು ಸಂತೋಷದಿಂದ ನಗಬಹುದು.

ನಿಂಬೆಯ ಬ್ಲೀಚಿಂಗ್ ಗುಣಲಕ್ಷಣಗಳು ಹಲ್ಲುಗಳಿಂದ ಹಳದಿ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತವೆ. ಇಲ್ಲಿ ಉಪ್ಪನ್ನು ಸಹ ಬಳಸಲಾಗಿದೆ. ನಿಂಬೆಗೆ ಉಪ್ಪನ್ನು ಸೇರಿಸಿದಾಗ, ಅದು ಪರಿಣಾಮಕಾರಿ ಔಷಧಿಯಾಗುತ್ತದೆ. 

ಇವೆರಡೂ ನಿಮ್ಮ ಹಲ್ಲುಗಳಿಂದ ಕೊಳೆಯನ್ನು ತೆಗೆದುಹಾಕುತ್ತವೆ. ಈ ಎರಡರ ಸಂಯೋಜನೆಯಿಂದ ಬರುವ ರಸವನ್ನು ನುಂಗುವ ಬದಲು, ಅದನ್ನು ಉಗುಳುವುದು ಬಹಳ ಮುಖ್ಯ. 

ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

ಎಚ್ಚರ! 

ನಿಮ್ಮ ನಾಯಿಗೆ ಈ ಆಹಾರಗಳನ್ನು ಯಾವತ್ತೂ ಕೊಡಲೇಬೇಡಿ

PEXELS