ಊಟದ ನಂತರ ಸೋಂಪು, ಕಲ್ಲು ಸಕ್ಕರೆ ತಿನ್ನುವುದೇಕೆ? 

By Rakshitha Sowmya
Jan 06, 2025

Hindustan Times
Kannada

ಹೋಟೆಲ್‌, ಮದುವೆ ಮನೆ ಅಥವಾ ಇನ್ನಿತರ ಸಮಾರಂಭಗಳಲ್ಲಿ ಊಟದ ನಂತರ ಸೋಂಪು, ಕಲ್ಲುಸಕ್ಕರೆ ಕೊಡುವುದುನ್ನು ನೀವು ಗಮನಿಸಬಹುದು

ಇದರಿಂದ ಬಹಳಷ್ಟು ಪ್ರಯೋಜನಗಳಿವೆ, ಕೆಲವರು ಸೋಂಫು, ಕಲ್ಲುಸಕ್ಕರೆಯನ್ನು ಮೌತ್‌ ಫ್ರೆಷ್ನರ್‌ ಆಗಿ ಬಳಸುತ್ತಾರೆ

ಊಟದ ಬಳಿಕ ಇದನ್ನು ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ, ಯಾವುದೇ ಉದರಸಂಬಂಧಿ ಸಮಸ್ಯೆ ಕಾಡುವುದಿಲ್ಲ

ಊಟದ ಬಳಿಕ ಕಲ್ಲುಸಕ್ಕರೆ, ಸೋಂಫು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯನ್ನು ನೀಗಿಸುತ್ತದೆ, ಹಿಮೊಗ್ಲೋಬಿನ್‌ ಸಮಸ್ಯೆ ಕೂಡಾ ಕಡಿಮೆಯಾಗುತ್ತದೆ

ಈ ಎರಡೂ ಪದಾರ್ಥಗಳು ವಿಟಮಿನ್‌ ಎ ಹೊಂದಿದೆ, ಇದನ್ನು ಸೇವಿಸುವುದರಿಂದ ಕಣ್ಣುಗಳಿಗೆ ಬಹಳ ಒಳ್ಳೆಯದು

ಊಟದ ನಂತರ ಹೊಟ್ಟೆ ಉಬ್ಬಿದ ಅಥವಾ ದಣಿದ ಅನುಭವ. ಆದರೆ ಸೋಂಫು ಸೇವಿಸಿದ ನಂತರ ಫ್ರೆಶ್‌ ಎನಿಸುತ್ತದೆ, ಆಯಾಸ ದೂರವಾಗುತ್ತದೆ

ಊಟದ ಬಳಿಕ ಬಾಯಿಯಿಂದ ಬರುವ ದುರ್ವಾಸನೆಯನ್ನು ತಡೆಯಲು ಈ ಸೋಂಪು ಬಹಳ ಪ್ರಯೋಜನಾಕಾರಿಯಾಗಿದೆ

ಊಟದ ನಂತರ ಸೋಂಫು ಸೇವಿಸಿದರೆ ನೀವು ಸೇವಿಸಿದ ಆಹಾರದಿಂದ ಶೀತ, ಕೆಮ್ಮು ಅಥವಾ ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾಗುವುದನ್ನು ತಡೆಯುತ್ತದೆ

ಸೋಂಪನ್ನು ಖಾಲಿ ಹೊಟ್ಟೆಯಲ್ಲೂ ತಿನ್ನಬಹುದು, ಆದರೆ ಊಟದ ಬಳಿಕ ತಿಂದರೆ ಹೆಚ್ಚಿನ ಪ್ರಯೋಜನ ದೊರೆಯುತ್ತದೆ

 ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ

ಬಂಗಾರದ ಗೊಂಬೆಯಂತೆ ಕಂಗೊಳಿಸಿದ ಚಾರು; ಸೀರೆಯಲ್ಲ ಈಗ ಗೌನ್‌ನಲ್ಲಿ ಮೌನ ಗುಡ್ಡೇಮನೆ