ಚೀನಾದಲ್ಲಿ ಹೆಚ್‌ಎಂಪಿ ಎಂಬ ಹೊಸ ವೈರಸ್ ಸದ್ದು ಮಾಡುತ್ತಿದ್ದು ಬೆಂಗಳೂರಿನ 8 ತಿಂಗಳ ಮಗುವಿಗೂ ಸೋಂಕು ದೃಢವಾಗಿದೆ
ಇದು ಮತ್ತೆ ಕೊರೊನಾ ಕಷ್ಟದ ದಿನಗಳನ್ನು ನೆನಪಿಸುವಂತೆ ಮಾಡಿದೆ. ಆದರೆ ಮನೆಮದ್ದುಗಳನ್ನು ಬಳಸಿಕೊಂಡು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಶುಂಠಿ ಚಹಾವನ್ನು ಸೇವಿಸುವುದರಿಂದ ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ, ಉರಿಯೂತ ಕಡಿಮೆ ಮಾಡುವುದೂ ಅಲ್ಲದೆ, ಶೀತ ಹಾಗೂ ಕೆಮ್ಮಿಗೆ ಪರಿಹಾರ ನೀಡುತ್ತದೆ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬೆಚ್ಚನೆ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸವನ್ನು ಸೇರಿಸಿ ಕುಡಿದರೆ ಗಂಟಲು ನೋವು ನಿವಾರಣೆಯಾಗುತ್ತದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ
ತುಳಸಿಯು ಸೋಂಕುಗಳ ವಿರುದ್ದ ಹೋರಾಡುತ್ತದೆ, ಇದರಲ್ಲಿರುವ ನೈಸರ್ಗಿಕ ಔಷಧೀಯ ಗುಣಗಳು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ
ಶೀತ, ಕೆಮ್ಮು ಹಾಗೂ ವೈರಸ್ ವಿರುದ್ಧ ಹೋರಾಡಲು ಅರಿಸಿನ ಮಿಶ್ರಿತ ಹಾಲು ಮತ್ತೊಂದು ಉತ್ತಮ ಆಯ್ಕೆ ಆಗಿದೆ, ಇದನ್ನು ಸೇವಿಸುವುದರಿಂದ ಪ್ರತಿರಕ್ಷಣಾ ವ್ಯವಸ್ಥೆ ಸುಧಾರಿಸುತ್ತದೆ
ಬೆಳ್ಳುಳ್ಳಿ ಸೂಪ್ ಕೂಡಾ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ, ಶೀತರೋಗಲಕ್ಷಣ, ಗಂಟಲುನೋವನ್ನು ಕಡಿಮೆ ಮಾಡುತ್ತದೆ, ಪತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ
ನಿಂಬೆಹಣ್ಣು, ಕಿತ್ತಲೆಹಣ್ಣು, ಕಿವಿಯಂಥ ವಿಟಮಿನ್ ಸಿ ಅಂಶವಿರುವ ಹಣ್ಣುಗಳು ಕೂಡಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಉಪಯುಕ್ತವಾಗಿದೆ.
ಬ್ಯಾಕ್ಟೀರಿಯಾಗಳನ್ನು ನಾಶ ಮಾಡಿ, ಗಂಟಲು ನೋವನ್ನು ಕಡಿಮೆ ಮಾಡಲು ಬಿಸಿನೀರಿಗೆ ಉಪ್ಪು ಸೇರಿಸಿ ಗಾರ್ಗಲ್ ಮಾಡಿ, ಇದರಿಂದ ಗಂಟಲುನೋವು ಕಡಿಮೆ ಆಗುವುದಲ್ಲದೆ, ಸೋಂಕು ಹರಡದಂತೆ ಸಹಾಯ ಮಾಡುತ್ತದೆ.