ಗುಲ್ಕನ್‌ ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು

By Rakshitha Sowmya
Jan 08, 2025

Hindustan Times
Kannada

ಗುಲ್ಕನ್‌ನ್ನು ಗುಲಾಬಿ ಹೂಗಳ ದಳಗಳಿಂದ ತಯಾರಿಸಲಾಗುತ್ತದೆ, ಇದನ್ನು ಗುಲಾಬಿ ಜ್ಯಾಮ್‌ ಎಂದೂ ಕರೆಯಲಾಗುತ್ತದೆ, ಸಿಹಿಯಾಗಿರುತ್ತದೆ

ಗುಲ್ಕನ್‌ ನೈಸರ್ಗಿಕ ಸಕ್ಕರೆ, ಫೈಬರ್, ವಿಟಮಿನ್ ಸಿ, ಖನಿಜಗಳು ಮತ್ತು ಅನೇಕ ರೀತಿಯ ಆಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತದೆ

ಗುಲ್ಕನ್‌ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆ ದೂರವಾಗುತ್ತದೆ, ಚರ್ಮಕ್ಕೆ ಹೊಳಪು ನೀಡುತ್ತದೆ, ಬಾಯಿ ದುರ್ವಾಸನೆ ಇರುವುದಿಲ್ಲ

ಆದರೆ ಇದನ್ನು ಸೇವಿಸುವುದರಿಂದ ಅನುಕೂಲಗಳು ಮಾತ್ರವಲ್ಲದೆ ಕೆಲವೊಂದು ಆರೋಗ್ಯ ಸಮಸ್ಯೆಗಳೂ ಉಂಟಾಗುತ್ತದೆ

ಮಧುಮೇಹಿಗಳು ಗುಲ್ಕನ್‌ ಸೇವಿಸುವುದರಿಂದ ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ

ತಣ್ಣನೆಯ ವಾತಾವರಣದಲ್ಲಿ ಗುಲ್ಕನ್‌ ಸೇವಿಸುವುದರಿಂದ ನಿಮಗೆ ಶೀತ, ಕೆಮ್ಮು ಉಂಟಾಗುತ್ತದೆ

 ಗುಲ್ಕನ್‌ನಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗಿದ್ದು, ಇದು ತೂಕವನ್ನು ವೇಗವಾಗಿ ಹೆಚ್ಚಿಸುತ್ತದೆ.

ಕೆಲವರಿಗೆ ಗುಲಾಬಿ ಹೂನಿಂದ ಮಾಡಿದ ಆಹಾರ ಪದಾರ್ಥಗಳು ಅಲರ್ಜಿ ಉಂಟುಮಾಡಬಹುದು, ಆದ್ದರಿಂದ ಅಂಥವರು ಗುಲ್ಕನ್‌ ಸೇವಿಸಬಾರದು

ಹೆಚ್ಚು ಗುಲ್ಕನ್‌ ತಿನ್ನುವುದರಿಂದ ಹಲ್ಲು ಹುಳುಕಾಗುತ್ತದೆ. ಮುಂದೆ ಇದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು

ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ 

ಮೂತ್ರದ ಬಣ್ಣ ಈ ರೀತಿ ಇದ್ದರೆ, ಆರೋಗ್ಯ ಸಮಸ್ಯೆಯ ಸೂಚನೆಯಿದು

Unsplash