ಮೂತ್ರಪಿಂಡಗಳ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ವಿಚಾರಗಳತ್ತ ಗಮನ ಹರಿಸಿ
pixabay
By Reshma
Jan 17, 2025
Hindustan Times
Kannada
ಮೂತ್ರಪಿಂಡಗಳು ಅಥವಾ ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಇದರ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಾವು ಪ್ರತಿದಿನ ಬೆಳಿಗ್ಗೆ ಈ ಕೆಲವು ಕೆಲಸಗಳನ್ನು ಮಾಡಬೇಕು
pixabay
ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇದರಿಂದ ಮೂತ್ರಪಿಂಡಗಳು ಶುದ್ಧವಾಗುತ್ತವೆ
pixabay
ಪ್ರತಿದಿನ ಬೆಳಿಗ್ಗೆ ಅರ್ಧ ಗಂಟೆ ವ್ಯಾಯಾಮ ಮಾಡಿ. ಇದರಿಂದ ಮೂತ್ರಪಿಂಡಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ ಹಾಗೂ ಅವುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ
pixabay
ಉಪಾಹಾರಕ್ಕೆ ಆರೋಗ್ಯಕರ ಆಹಾರ ಸೇವಿಸಿ. ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ತಿನ್ನಬೇಡಿ
pixabay
ನಿಮ್ಮ ಉಪಾಹಾರದಲ್ಲಿ ಹಣ್ಣುಗಳು, ತರಕಾರಿಗಳು ಮತ್ತು ಪ್ರೊಟೀನ್ ಸಮೃದ್ಧ ಆಹಾರಗಳು ಸೇರಿರಲಿ
pixabay
ಮೂತ್ರಪಿಂಡದಲ್ಲಿನ ವಿಷವನ್ನು ಹೊರಹಾಕಲು ಗಿಡಮೂಲಿಕೆ ಚಹಾ ಕುಡಿಯುವುದು ಒಳ್ಳೆಯದು
pixabay
ಬೆಳಿಗ್ಗೆ ಬೇಗನೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಪರಿಶೀಲಿಸಿ. ಸಕ್ಕರೆ ಮಟ್ಟ ಹೆಚ್ಚಿದ್ದರೆ, ಮೂತ್ರಪಿಂಡಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ
pixabay
ಆರೋಗ್ಯಕರ ರಕ್ತದೊತ್ತಡವನ್ನು ಕಾಪಾಡಿಕೊಳ್ಳಿ. ಇಲ್ಲದಿದ್ದರೆ, ಮೂತ್ರಪಿಂಡದ ಸಮಸ್ಯೆಗಳು ಉಂಟಾಗುತ್ತವೆ. ಬೆಳಿಗ್ಗೆ ಯೋಗ ಮತ್ತು ಧ್ಯಾನ ಮಾಡಬೇಕು
pixabay
ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಫೀನ್ ಮೂತ್ರಪಿಂಡಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
pixabay
ಬೆಳಿಗ್ಗೆ ಸ್ವಲ್ಪ ಸಮಯದವರೆಗೆ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಬೇಕು
pixabay
ಉಪ್ಪು ಕಡಿಮೆ ತಿಂದಷ್ಟೂ ಒಳ್ಳೆಯದು. ಉಪ್ಪಿನಾಂಶ ಹೆಚ್ಚಿರುವ ಆಹಾರಗಳ ಸೇವನೆಯು ಮೂತ್ರಪಿಂಡಗಳಿಗೆ ಹಾನಿ ಮಾಡಬಹುದು
pixabay
ಓಂಕಾಳು ಸೇವನೆಯ ಆರೋಗ್ಯ ಪ್ರಯೋಜನಗಳಿವು
Flickr
ಮುಂದಿನ ಸ್ಟೋರಿ ಕ್ಲಿಕ್ ಮಾಡಿ