ಮಳೆಗಾಲದಲ್ಲಿ ಸೊಪ್ಪು ತಿಂದರೆ ಆರೋಗ್ಯಕ್ಕೆ ಅನುಕೂಲವೇ? ನೀವು ತಿಳಿಯಲೇಬೇಕಾದ ಮಾಹಿತಿ ಇದು

By Reshma
Jul 18, 2024

Hindustan Times
Kannada

ಬಿಸಿಲ ಬೇಗೆಯಿಂದ ಮಳೆಗಾಲ ತಂಪು ನೀಡಿದರೂ ಈ ಸಮಯದಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಹೆಚ್ಚು. ಮಾನ್ಸೂನ್‌ ಋತುವಿನಲ್ಲಿ ನೆಗಡಿ, ಜ್ವರ, ಡೆಂಗ್ಯೂ, ಮಲೇರಿಯಾದಂತಹ ಸಮಸ್ಯೆಗಳು ಕಾಡುವುದು ಸಹಜ. 

ಆರೋಗ್ಯ ತಜ್ಞರ ಪ್ರಕಾರ ಹವಾಮಾನ ಬದಲಾವಣೆಯು ದೇಹದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳಲು ಕಾರಣವಾಗುತ್ತದೆ. ಇದರಿಂದ ಮನುಷ್ಯರು ಸುಲಭವಾಗಿ ಸೋಂಕಿಗೆ ತುತ್ತಾಗುತ್ತಾರೆ. 

ಮಳೆಗಾಲದಲ್ಲಿ ನಾವು ಸೇವಿಸುವ ಆಹಾರದ ಬಗ್ಗೆ ಸಾಕಷ್ಟು ಗಮನ ಹರಿಸಬೇಕು. ಈ ಋತುವಿನಲ್ಲಿ ಕರಿದ ಮತ್ತು ಹೊರಗಿನ ಆಹಾರಗಳ ಸೇವನೆಗೆ ಕಡಿವಾಣ ಹಾಕಬೇಕು.

ಮಳೆಗಾಲದಲ್ಲಿ ಸೊಪ್ಪು ತಿನ್ನಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆಗಳಿರುವುದು ಸಹಜ. 

ಮಳೆಗಾಲದಲ್ಲಿ ಏಕಾಏಕಿ ಸೊಪ್ಪುಗಳನ್ನು ತಿನ್ನುವುದನ್ನು ನಿಲ್ಲಿಸಬೇಕು ಎಂದು ತಜ್ಞರು ಸಲಹೆ ನೀಡುವುದಿಲ್ಲ. ಬದಲಾಗಿ ಸೊಪ್ಪುಗಳನ್ನು ತಿನ್ನುವಾಗ ಕೆಲವು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 

ಮಳೆಗಾಲದಲ್ಲಿ ಸೊಪ್ಪಿನ ಅಡುಗೆಗಳನ್ನು ಮಾಡಲು ಬಯಸಿದರೆ ಅಡುಗೆಗೂ ಮೊದಲು ಬಿಸಿ ನೀರಿನಲ್ಲಿ ಉಪ್ಪು ಹಾಗೂ ವಿನೇಗರ್‌ ಬಳಸಿ ತೊಳೆಯಿರಿ. 

ಕೆಲವರು ಹಸಿ ಸೊಪ್ಪನ್ನು ಸಲಾಡ್ ರೂಪದಲ್ಲಿ ಸೇವಿಸುತ್ತಾರೆ. ಆದರೆ ಮಳೆಗಾಲದಲ್ಲಿ ಹೀಗೆ ತಿನ್ನಬೇಡಿ. ಸಾಧ್ಯವಾದಷ್ಟು ಬೇಯಿಸಿ ತಿನ್ನುವ ಅಭ್ಯಾಸ ರೂಢಿಸಿಕೊಳ್ಳಿ. 

ಹೊರಗಡೆ ರೆಸ್ಟೋರೆಂಟ್‌ಗಳಲ್ಲಿ ಸೊಪ್ಪಿನ ಖಾದ್ಯಗಳನ್ನು ತಿನ್ನದೇ ಇರುವುದು ಉತ್ತಮ. 

ಸಾಮಾನ್ಯವಾಗಿ ಪಾಲಕ್‌, ಹೂಕೋಸು, ಎಲೆಕೋಸು ಮತ್ತು ಕೋಸುಗಡ್ಡೆಯಂತಹ ತರಕಾರಿಗಳು ಮಳೆಗಾಲದಲ್ಲಿ ಹೆಚ್ಚು ಕಲುಷಿತಗೊಂಡಿರುತ್ತವೆ. ಹಾಗಾಗಿ ಇವುಗಳ ಸೇವನೆಯನ್ನು ತಪ್ಪಿಸುವುದು ಉತ್ತಮ. 

ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂರ್ಪಕಿಸಿ. 

ಗರ್ಭಿಣಿಯರು ಸೇವಿಸಲೇಬೇಕಾದ 5 ಹಣ್ಣುಗಳಿವು

Image Credits: Adobe Stock