ತುಪ್ಪ–ಜೇನುತುಪ್ಪ ಬೆರೆಸಿ ತಿನ್ನುವ ಅಭ್ಯಾಸ ಇದ್ರೆ ಇಂದೇ ಬಿಟ್ಟುಬಿಡಿ, ಕಾರಣ ಹೀಗಿದೆ
By Reshma Aug 24, 2024
Hindustan Times Kannada
ಆಯುರ್ವೇದ ವೈದ್ಯ ಪದ್ಧತಿಯಲ್ಲಿ ತುಪ್ಪ ಹಾಗೂ ಜೇನುತುಪ್ಪಕ್ಕೆ ಸಾಕಷ್ಟು ಮಹತ್ವವಿದೆ. ಇವುಗಳ ಸೇವನೆಯಿಂದ ಆರೋಗ್ಯ ಸಾಕಷ್ಟು ಪ್ರಯೋಜನಗಳಿವೆ.
ತುಪ್ಪ ಹಾಗೂ ಜೇನುತುಪ್ಪ ಎರಡೂ ಆರೋಗ್ಯಕ್ಕೆ ಉತ್ತಮ. ಆದರೆ ಈ ಎರಡನ್ನೂ ಒಟ್ಟಿಗೆ ತಿನ್ನುವುದು ಒಳ್ಳೆಯದಲ್ಲ.
ತುಪ್ಪವನ್ನು ಹಾಲಿನಿಂದ ತಯಾರಿಸಲಾಗುತ್ತದೆ. ಜೇನುತುಪ್ಪ ಜೇನುನೊಣಗಳಿಂದ ತಯಾರಾಗುವ ನೈಸರ್ಗಿಕ ಉತ್ಪನ್ನ. ಈ ಎರಡನ್ನು ಒಟ್ಟಿಗೆ ತಿನ್ನುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ತಿಳಿಯೋಣ.
ತುಪ್ಪ ಹಾಗೂ ಜೇನುತುಪ್ಪ ಮಿಶ್ರಣವನ್ನು 140 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚು ಬಿಸಿ ಮಾಡಿದಾಗ ವಿಷಕಾರಿ ಪರಿಣಾಮ ಬೀರುತ್ತದೆ.
ತುಪ್ಪ–ಜೇನುತುಪ್ಪದ ಮಿಶ್ರಣವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂಬುದು ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ. ಅಲ್ಲದೇ ಅವುಗಳ ಅಂಗಾಂಗದಲ್ಲಿ ಇದ್ದಕ್ಕಿದ್ದಂತೆ ತೂಕ ಹೆಚ್ಚಳವಾಗಿರುವುದು ಬೆಳಕಿಗೆ ಬಂದಿದೆ
ಈ ಎರಡನ್ನೂ ಸೇರಿಸಿ ಬಿಸಿ ಮಾಡಿದಾಗ ಪಿಎಚ್, ಹೈಡ್ರಾಕ್ಸಿ ಮೀಥೈಲ್, ಫಪ್ಯೂರಲ್ ಅಥವಾ ಎಚ್‌ಎಂಎಫ್, ಬ್ರೌನಿಂಗ್, ಫಿನಾಲಿಕ್ಸ್ ಮತ್ತು ಉತ್ಕರ್ಷಣ ನಿರೋಧಕ ಪ್ರತಿಕ್ರಿಯೆ ಹೆಚ್ಚಾಗುತ್ತದೆ ಎಂಬುದನ್ನು ಈ ಪ್ರಯೋಗದಲ್ಲಿ ಕಂಡುಕೊಳ್ಳಲಾಗಿದೆ.
ಆರೋಗ್ಯ ತಜ್ಞರ ಪ್ರಕಾರ ಜೇನುತುಪ್ಪ ಮತ್ತು ತುಪ್ಪದ ಮಿಶ್ರಣ ತಿನ್ನುವುದರಿಂದ ಹೊಟ್ಟೆನೋವು ಬರುತ್ತದೆ. ಈ ಮಿಶ್ರಣವು ಹೊಟ್ಟೆಯಲ್ಲಿ ರಾಸಾಯನಿಕಗಳನ್ನು ಸೃಷ್ಟಿಸುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ
ಜೇನುತುಪ್ಪ ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಇದರಿಂದಾಗಿ ನಿಮ್ಮ ಚರ್ಮದಲ್ಲಿ ದದ್ದು, ತುರಿಕೆಯಂತಹ ಸಮಸ್ಯೆಗಳು ಎದುರಾಗಬಹುದು
ಜೇನುತುಪ್ಪ ಹಾಗೂ ತುಪ್ಪವನ್ನು ಒಟ್ಟಾಗಿ ಸೇವಿಸುವುದರಿಂದ ಇದು ನಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದು ರೋಗನಿರೋಧಕ ಶಕ್ತಿ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ
ಈ ಮಾಹಿತಿಯ ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ