ಬೆಳಿಗ್ಗೆ ಏಳಲು ಇದೇ ಸರಿಯಾದ ಸಮಯ, ಇಲ್ಲವಾದರೆ ಅಪಾಯ
By Prasanna Kumar P N
Sep 12, 2024
Hindustan Times
Kannada
ರಾತ್ರಿ ವೇಳೆ ಸಮಯಕ್ಕೆ ಸರಿಯಾಗಿ ಮಲಗಬೇಕು. ಬೆಳಿಗ್ಗೆ ಬೇಗ ಏಳಬೇಕು ಎಂದು ಹಿರಿಯರು ಹಿಂದಿನಿಂದಲೂ ಸಲಹೆ ನೀಡುತ್ತಾ ಬಂದಿದ್ದಾರೆ. ವಿಜ್ಞಾನವೂ ಇದನ್ನೇ ಹೇಳುತ್ತದೆ.
ಪ್ರತಿದಿನ ಬೆಳಿಗ್ಗೆ ಬೇಗನೆ ಏಳುವುದು ಆರೋಗ್ಯಕ್ಕೆ ಪ್ರಯೋಜನಕಾರಿ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
ಇಂದಿನ ಬಿಡುವಿಲ್ಲದ ಜೀವನದಲ್ಲಿ ಜನರು ಸರಿಯಾಗಿ ನಿದ್ದೆ ಮಾಡುವುದು ಕಷ್ಟವಾಗಿದೆ. ಆದರೆ ಬೆಳಗ್ಗೆ ಬೇಗ ಎದ್ದಷ್ಟೂ ತುಂಬಾ ಆರೋಗ್ಯ ಪ್ರಯೋಜನಕಾರಿಗಳಿವೆ.
ಆರೋಗ್ಯ ತಜ್ಞರ ಪ್ರಕಾರ, ಆರೋಗ್ಯವಂತ ವಯಸ್ಕ ವ್ಯಕ್ತಿ ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ಇದು ನಿಮ್ಮನ್ನು ತುಂಬಾ ಆರೋಗ್ಯವಂತರನ್ನಾಗಿ ಮಾಡಲಿದೆ.
ಅದಕ್ಕಿಂತ ಕಡಿಮೆ ನಿದ್ದೆ ಮಾಡಿದ್ದೇ ಆದರೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವುದು ಖಚಿತ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಆರೋಗ್ಯ ತಜ್ಞರ ಪ್ರಕಾರ, ರಾತ್ರಿ 10 ರಿಂದ 11ರ ನಡುವೆ ಮಲಗಬೇಕು. ಬೆಳಿಗ್ಗೆ 6 ರಿಂದ 7 ಗಂಟೆಯೊಳಗೆ ಎದ್ದರೆ ದೇಹಕ್ಕೆ ಉತ್ತಮ ಆರೋಗ್ಯ ಒದಗಿಸಿಕೊಡುತ್ತದೆ.
ಬೆಳಗ್ಗೆ ಬೇಗನೇ ಏಳುವುದರಿಂದ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತವೆ. ವ್ಯಾಯಾಮ, ವಾಕಿಂಗ್, ಓದುವಿಕೆ, ಉಪಹಾರ ಇತ್ಯಾದಿ.. ಸಮಯಕ್ಕೆ ಸರಿಯಾಗಿ ಮುಗಿಸಲಿದ್ದೀರಿ.
ಅಲ್ಲದೆ, ಸದಾ ಪಾಸಿಟಿವ್ ಆಗಿರಿಸಲು ಸಹ ನೆರವಾಗುತ್ತದೆ. ಇದು ನಿಮಗೆ ಉತ್ತಮ ದಿನವನ್ನಾಗಿಸುತ್ತದೆ.
ವೇಟ್ಟೈಯನ್ ಚಿತ್ರಕ್ಕಾಗಿ ಬಚ್ಚನ್‌ಗಿಂತ ರಜನಿಗೆ 17 ಪಟ್ಟು ಹೆಚ್ಚು ಸಂಭಾವನೆ!
ಮುಂದಿನ ಸ್ಟೋರಿ ಕ್ಲಿಕ್ ಮಾಡಿ