ಅನ್ನ ಮಿಕ್ಕಿದ್ರೆ ಎತ್ತಿಟ್ಟು ತಿನ್ನೋದು ಆರೋಗ್ಯಕ್ಕೆ ಒಳ್ಳೆದಾ? ಇಲ್ಲಿದೆ ಉತ್ತರ 

By Reshma
Oct 17, 2024

Hindustan Times
Kannada

ಸಾಮಾನ್ಯವಾಗಿ ಅನ್ನ ಮಿಕ್ಕಿದ್ರೆ ನಾವು ಅದನ್ನು ಫ್ರಿಜ್‌ನಲ್ಲಿಟ್ಟು ಮರುದಿನ ತಿನ್ನುತ್ತೇವೆ. ಹಾಗಾದರೆ ಮಿಕ್ಕಿದ ಅನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೋ ಅಲ್ಲವೋ ಎಂಬುದನ್ನು ನೋಡೋಣ

ಮಿಕ್ಕಿದ ಅನ್ನ ತಿನ್ನಲು ಸುರಕ್ಷಿತವಲ್ಲ. ಅದು ನಿಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಕ್ಕಿಯಲ್ಲಿ ಬ್ಯಾಸಿಲಸ್‌ ಸೆರಿಯಸ್ ಎಂಬ ಬ್ಯಾಕ್ಟೀರಿಯಾ ಇರುತ್ತದೆ. ಅನ್ನ ಇಡುವುದರಿಂದ ಈ ಬ್ಯಾಕ್ಟೀರಿಯಾಗಳು ಹೆಚ್ಚುತ್ತದೆ. ಇದು ಫುಡ್‌ ಪಾಯಿಸನ್‌ಗೂ ಕಾರಣವಾಗುತ್ತದೆ 

ಅನ್ನವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಇಡುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ. ಇದನ್ನು ಮತ್ತೆ ಬಿಸಿ ಮಾಡಿದ್ರೂ ಪ್ರಯೋಜನವಿಲ್ಲ 

ಬ್ಯಾಸಿಲಸ್ ಸೆರಿಯಸ್ ಬ್ಯಾಕ್ಟೀರಿಯಾವಿರುವ ಆಹಾರ ತಿನ್ನುವುದರಿಂದ ಫುಡ್ ಪಾಯಿಸನ್ ಆಗಬಹುದು. ಇದರಿಂದ ವಾಂತಿ, ವಾಕರಿಕೆ, ಅತಿಸಾರದಂತಹ ಸಮಸ್ಯೆಗಳೂ ಎದುರಾಗಬಹುದು 

ಅನ್ನವನ್ನು ಸರಿಯಾಗಿ ಸಂಗ್ರಹಿಸಿ ಇಡುವುದರಿಂದ ಅದು ಹಾಳಾಗುವುದನ್ನ ತಡೆಯಬಹುದು ಮತ್ತು ಬ್ಯಾಕ್ಟೀರಿಯಾಗಳು ಹರಡದಂತೆ ನೋಡಿಕೊಳ್ಳಬಹುದು 

ಬೇಯಿಸಿದ ಅನ್ನವನ್ನು ಕೂಡಲೇ ತಣ್ಣಗಾಗಿಸಬೇಕು. ಬಿಸಿ ವಾತಾವರಣದಲ್ಲಿ ಬೆಳೆಯುವ ಬ್ಯಾಕ್ಟೀರಿಯಾವನ್ನು ತಪ್ಪಿಸಲು ತಣ್ಣಗಾಗುವುದು ಮುಖ್ಯ 

ನಂತರ ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ತುಂಬಿಸಿ ಇಡಬೇಕು. ಗಾಳಿಗೆ ಒಡ್ಡಿಕೊಳ್ಳುವುದು ಕೂಡ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗಬಹುದು 

ಅನ್ನ ಮಾಡಿದ ಒಂದು ಗಂಟೆಯೊಳಗೆ ಫ್ರಿಜ್‌ನಲ್ಲಿಟ್ಟು ಸಂಗ್ರಹಿಸಿದರೆ ಇದನ್ನು ತಿನ್ನಬಹುದು. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನೂ ಕಡಿಮೆ ಮಾಡುತ್ತದೆ

ಉಳಿದ ಅನ್ನವನ್ನು ಮತ್ತೆ ಬಿಸಿ ಮಾಡುವುದರಿಂದ ಆಹಾರದಿಂದ ಹರಡುವ ರೋಗವನ್ನು ಕೊಂಚ ಕಡಿಮೆ ಮಾಡಬಹುದು, ಆದರೂ ಇದನ್ನು ಫ್ರಿಜ್‌ನಲ್ಲಿಟ್ಟು ನಂತರ ತಿನ್ನುವುದು ಉತ್ತಮ. ನೀರು ಚಿಮುಕಿಸಿ, ಹಬೆಯಲ್ಲಿ ಬೇಯಿಸಿ ತಿನ್ನಬೇಕು ಎನ್ನುವುದು ತಜ್ಞರ ಸಲಹೆ 

ಬ್ಲಾಕ್‌ ಡ್ರೆಸ್‌ನಲ್ಲಿ ನಿವೇದಿತಾ ಗೌಡ; ಇಲ್ಲಿವೆ ಫೋಟೋಸ್