ಪುರುಷರಲ್ಲಿ ಫಲವಂತಿಕೆ ಕಡಿಮೆಯಾಗಲು ಕಾರಣವಾಗುತ್ತಿದೆ ಈ ವಸ್ತು, ಇರಲಿ ಎಚ್ಚರ

By Reshma
Jan 27, 2025

Hindustan Times
Kannada

ಜೀವನಶೈಲಿಯಲ್ಲಿ ನಾವು ಅನುಸರಿಸುವ ಕೆಲವು ತಪ್ಪುಗಳು ಫಲವಂತಿಕೆ ಕಡಿಮೆಯಾಗಲು ಕಾರಣವಾಗುತ್ತಿದೆ. ಅಂಕಿ–ಅಂಶಗಳ ಪ್ರಕಾರ, ಶೇ 30 ರಿಂದ 50 ರಷ್ಟು ಬಂಜೆತನದ ಸಮಸ್ಯೆ ಪುರುಷರಲ್ಲೇ ಕಾಣಿಸುತ್ತಿದೆ

ಪುರುಷರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಲು ಕಾರಣಗಳು ಹಲವಿದ್ದರೂ ಇದಕ್ಕೆ ಪ್ರಮುಖ ಕಾರಣವೊಂದು ಇದೀಗ ಬಹಿರಂಗವಾಗಿದೆ 

ಶೇವಿಂಗ್ ಮಾಡುವಾಗ ಬಳಸುವ ವಸ್ತುವೊಂದು ಪುರುಷರಲ್ಲಿ ಬಂಜೆತನ ಹೆಚ್ಚಲು ಕಾರಣವಾಗಿದೆ ಎಂದು ಅಮೆರಿಕದಲ್ಲಿ ನಡೆದ ಅಧ್ಯಯನವೊಂದು ಸಾಬೀತು ಪಡಿಸಿದೆ 

ದುಬಾರಿ, ಪರಿಮಳಯುಕ್ತ ಶೇವಿಂಗ್ ಕ್ರೀಮ್ ಮತ್ತು ಆಫ್ಟರ್ ಶೇವ್ ಕ್ರೀಮ್‌ ಬಳಸುವುದರಿಂದ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ 

ಹೆಚ್ಚಿನ ಶೇವಿಂಗ್ ಕ್ರೀಮ್‌ಗಳು ಅತಿಯಾದ ರಾಸಾಯನಿಕಗಳ ಬಳಕೆಯನ್ನು ಹೆಚ್ಚಿಸುತ್ತವೆ ಎಂದು ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳುತ್ತಾರೆ 

ವರದಿಗಳ ಪ್ರಕಾರ ಅನೇಕ ಶೇವಿಂಗ್ ಕ್ರೀಮ್‌ಗಳು ಥಾಲೇಟ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ 

ಪ್ಲಾಸ್ಟಿಕ್ ವಸ್ತುಗಳ ನಮ್ಯತೆಯನ್ನು ಹೆಚ್ಚಿಸಲು ಈ ರಾಸಾಯನಿಕಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ

ಈ ಥಾಲೇಟ್ ವೀರ್ಯಾಣುಗಳ ಬೆಳವಣಿಗೆ ಕುಂಠಿತವಾಗುವಂತೆ ಮಾಡುತ್ತದೆ ಮತ್ತು ಅವುಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ 

ಇದು ವೀರ್ಯದ ಸಾಮರ್ಥ್ಯವನ್ನು ಕುಗ್ಗಿಸುವ ಕಾರಣ ಪುರುಷರಲ್ಲಿ ಬಂಜೆತನ ಹೆಚ್ಚಲು ಕಾರಣವಾಗುತ್ತಿದೆ ಎಂದು ಈ ಅಧ್ಯಯನವು ಹೇಳುತ್ತಿದೆ 

ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ 

ಜಿಎಸ್‌ ಶಿವರುದ್ರಪ್ಪ ಜನ್ಮದಿನದಂದು ಅವರ 10 ಜನಪ್ರಿಯ ಭಾವಗೀತೆಗಳು