ಮಳೆಗಾಲದಲ್ಲಿ ಬೆಲ್ಲದಿಂದ ಮಾಡಿದ ಚಹಾ ಕುಡಿದ್ರೆ ಆರೋಗ್ಯಕ್ಕೆ ಇಷ್ಟೊಂದು ಲಾಭ
By Reshma Jul 08, 2024
Hindustan Times Kannada
ಮಳೆಗಾಲ ಆರಂಭವಾದ ತಕ್ಷಣ ಆರೋಗ್ಯ ಹದಗೆಡಲು ಶುರುವಾಗುತ್ತದೆ. ಶೀತ, ನೆಗಡಿ, ವೈರಲ್ ಫಿವರ್ ಇಂತಹ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ.
ಬೆಲ್ಲದ ಚಹಾವು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಬಲ್ಲದು. ಮಳೆಗಾಲದಲ್ಲಿ ಬೆಲ್ಲದ ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನಾವು ನಿಮಗೆ ಹೇಳುತ್ತೇವೆ.
ಪ್ರತಿದಿನ ಬೆಲ್ಲದ ಚಹಾ ಕುಡಿಯುವುದರಿಂದ ದೇಹಕ್ಕೆ ಪೋಷಕಾಂಶ ಸೇರುತ್ತದೆ. ಆರೋಗ್ಯಕ್ಕೆ ಅಗತ್ಯವಾದ ಖನಿಜಗಳು, ವಿಟಮಿನ್‌ಗಳು, ಆಂಟಿಆಕ್ಸಿಡೆಂಟ್‌ಗಳು ಬೆಲ್ಲ ಚಹಾದಿಂದ ದೇಹಕ್ಕೆ ಸೇರುತ್ತವೆ.
Enter text Here
ಆರೋಗ್ಯ ತಜ್ಞರ ಪ್ರಕಾರ ಬೆಲ್ಲದ ಚಹಾವನ್ನು ಪ್ರತಿದಿನ ಕುಡಿಯುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ. ಇದಲ್ಲದೇ, ಇದರ ಸೇವನೆಯಿಂದ ದೇಹದ ರಕ್ತಪರಿಚಲನೆಯೂ ಸುಧಾರಿಸುತ್ತದೆ.
ಪೊಟ್ಯಾಶಿಯಂ ಸಮೃದ್ಧವಾಗಿರುವ ಬೆಲ್ಲದ ಚಹಾವನ್ನು ಪ್ರತಿದಿನ ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ಕೆಮ್ಮು, ಅಸ್ತಮಾ, ಶೀತ ಇತ್ಯಾದಿ ಉಸಿರಾಟದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಲು ಪ್ರತಿದಿನ ನಿಮ್ಮ ಚಹಾಕ್ಕೆ ಬೆಲ್ಲ ಸೇರಿಸಿ ಕುಡಿಯಬಹುದು.
ಬೆಲ್ಲದ ಚಹಾದಲ್ಲಿ ಸತು ಮತ್ತು ಸೆಲಿನಿಯನಂತಹ ಪೋಷಕಾಂಶಗಳು ಕಂಡುಬರುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿ ಹೆಚ್ಚಲು ಪರಿಣಾಮಕಾರಿ.
ವಾಂತಿ, ಭೇದಿ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಪರಿಹಾರ ಪಡೆಯಲು ನೀವು ಪ್ರತಿದಿನ ಬೆಲ್ಲದ ಚಹಾವನ್ನು ಕುಡಿಯಬಹುದು. ಬೆಲ್ಲವು ಜೀರ್ಣಕ್ರಿಯೆಯನ್ನು ಸುಧಾರಿಸಲು ಪ್ರಯೋಜನಕಾರಿ. ಇದರಲ್ಲಿ ನಾರಿನಾಂಶವೂ ಹೇರಳವಾಗಿರುತ್ತದೆ.
ಬೆಲ್ಲದಲ್ಲಿ ಉತ್ತಮ ಪ್ರಮಾಣದ ಕಬ್ಬಿಣಾಂಶವಿದ್ದು ಇದು ದೇಹದಲ್ಲಿನ ರಕ್ತದ ಕೊರತೆಯನ್ನು ಹೋಗಲಾಡಿಸಿ, ರಕ್ತಹೀನತೆಯಂತಹ ಗಂಭೀರ ಕಾಯಿಲೆಗಳಿಂದ ರಕ್ಷಿಸಿಲು ಸಹಕಾರಿಯಾಗಿದೆ.
ಈ ಸುದ್ದಿ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.
ಚಳಿ ಜೋರಾಗಿದೆ, ಸ್ವೆಟರ್ ಖರೀದಿಸುವ ಪ್ಲಾನ್ ಇದ್ದರೆ ಈ ವಿಚಾರ ಗಮನದಲ್ಲಿರಲಿ