ಆರೋಗ್ಯಕ್ಕೆ ವರ ನಿತ್ಯಪುಷ್ಪ; ಹೂವು ಮಾತ್ರವಲ್ಲ ಎಲೆಯೂ ಮದ್ದು

By Reshma
Oct 19, 2024

Hindustan Times
Kannada

ಸಾಮಾನ್ಯವಾಗಿ ಬಹುತೇಕರ ಮನೆ ಮುಂದೆ ನಿತ್ಯ ಪುಷ್ಪ ಗಿಡಗಳನ್ನು ಬೆಳೆಸಲಾಗುತ್ತದೆ. ಇದು ಸರ್ವಕಾಲಕ್ಕೂ ಹೂ ಬಿಡುವ ಗಿಡ. ಇದು ಮನೆಯ ಅಂದ ಹೆಚ್ಚಿಸುವುದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ 

ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ನಿತ್ಯಪುಷ್ಪದ ಹೂವಷ್ಟೇ ಅಲ್ಲ ಎಲೆ ಕೂಡ ಪ್ರಯೋಜನಕಾರಿ 

ಇದರಿಂದ ಚಹಾ ತಯಾರಿಸಿ ಕುಡಿಯುವುದರಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಇದು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನೂ ವೃದ್ಧಿಸುತ್ತದೆ 

ನಿತ್ಯಹರಿದ್ವರ್ಣ ಅಥವಾ ನಿತ್ಯಪುಷ್ಪ ಹೂಗಳು ಮಧುಮೇಹ ನಿರ್ವಹಣೆಗೂ ಉತ್ತಮ ಎಂದು ಹೇಳಲಾಗುತ್ತದೆ. ಇದರ ಎಲೆಗಳು ಕಹಿ ಇದ್ದು, ಇದರಿಂದ ಕಷಾಯ ಮಾಡಿ ಕುಡಿಯಲಾಗುತ್ತದೆ 

ನಿತ್ಯಪುಷ್ಪದ ಹೂವುಗಳು ಹಾಗೂ ಎಲೆಗಳು ಚರ್ಮಕ್ಕೂ ಒಳ್ಳೆಯದು. ಇದರ ಫೇಸ್‌ಪ್ಯಾಕ್‌ನಿಂದ ತ್ವಚೆಯ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತವೆ 

ಶೀತ ಮತ್ತು ಕೆಮ್ಮನಿಂದ ಪರಿಹಾರ ಪಡೆಯಲು ನಿತ್ಯಪುಷ್ಪ ಹೂವನ್ನು ಬಿಸಿ ನೀರಿಗೆ ಹಾಕಿ ಹಬೆ ತೆಗೆದುಕೊಳ್ಳಬೇಕು 

ಮಧುಮೇಹ ಮಾತ್ರವಲ್ಲದೇ ನಿತ್ಯಪುಷ್ಪ ಹೂಗಳು ಹಾಗೂ ಎಲೆ ರಕ್ತದೊತ್ತಡ ಕಾಪಾಡಿಕೊಳ್ಳಲು ಕೂಡ ಸಹಕಾರಿ

ಗಾಯವಾಗಿದ್ದರೆ ನಿತ್ಯಪುಷ್ಪ ಹೂವಿನ ಎಲೆಯ ರಸ ಹಚ್ಚುವುದರಿಂದ ಪರಿಹಾರ ಕಂಡುಕೊಳ್ಳಬಹುದು 

ಈ ಸುದ್ದಿಯು ಸಾಮಾನ್ಯಜ್ಞಾನವನ್ನ ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ

ಶನಿ ಜಯಂತಿ ದಿನ ಏನು ದಾನ ಮಾಡಬೇಕು; ಇದರಿಂದ ಏನೆಲ್ಲಾ ಪ್ರಯೋಜನಗಳಿವೆ