ಪಪ್ಪಾಯಿಯೊಂದಿಗೆ ಈ ಆಹಾರಗಳನ್ನು ಎಂದಿಗೂ ಸೇವಿಸಬೇಡಿ
By Reshma
Jul 30, 2024
Hindustan Times
Kannada
ಪಪ್ಪಾಯ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಸಾಕಷ್ಟು ಪೋಷಕಾಂಶಗಳಿಂದ ತುಂಬಿರುವ ಹಣ್ಣು.
ಪ್ರತಿದಿನ ಪಪ್ಪಾಯ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಣೆಯಾಗುತ್ತವೆ.
ಅದಾಗ್ಯೂ ಪಪ್ಪಾಯದೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದು ಹಾನಿಕರ.
ಪಪ್ಪಾಯದೊಂದಿಗೆ ತಪ್ಪಿಯೂ ಈ ಆಹಾರಗಳನ್ನು ಸೇವಿಸಬೇಡಿ.
ಪಪ್ಪಾಯದ ಜೊತೆ ಸೌತೆಕಾಯಿ ತಿನ್ನಬಾರದು. ಇದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಹೆಚ್ಚು.
ಆರೋಗ್ಯ ತಜ್ಞರ ಪ್ರಕಾರ ಪಪ್ಪಾಯದೊಂದಿಗೆ ದ್ರಾಕ್ಷಿ ತಿನ್ನಬಾರದು. ಇದು ಆಸಿಡಿಟಿ ಸಮಸ್ಯೆ ಉಂಟು ಮಾಡಲು ಕಾರಣವಾಗುತ್ತದೆ.
ಹಾಲು ಹಾಗೂ ಹಾಲಿನ ಉತ್ಪನ್ನಗಳೊಂದಿಗೆ ಪಪ್ಪಾಯ ಸೇವಿಸುವಂತಿಲ್ಲ. ಇದರಿಂದಲೂ ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತವೆ.
ಎಣ್ಣೆಯಲ್ಲಿ ಕರಿದ ಪದಾರ್ಥಗಳನ್ನು ಪಪ್ಪಾಯದೊಂದಿಗೆ ಸೇವಿಸಬಾರದು.
ಸಿಟ್ರಿಕ್ ಅಂಶ ಇರುವ ಹಣ್ಣುಗಳ ಜೊತೆ ಕೂಡ ಪಪ್ಪಾಯ ತಿನ್ನಬಾರದು. ಇದು ಕೂಡ ಜೀರ್ಣಕ್ರಿಯೆ ತೊಂದರೆಯ ಜೊತೆಗೆ ಆಸಿಡಿಟಿ, ಗ್ಯಾಸ್ಟ್ರಿಕ್‌ನಂತಹ ತೊಂದರೆಗಳನ್ನು ಉಂಟು ಮಾಡಬಹುದು.
ಟೊಮೆಟೊದೊಂದಿಗೆ ಪಪ್ಪಾಯ ಸೇವಿಸಬಾರದು. ಏಕೆಂದರೆ ಟೊಮೆಟೊ ಆಮ್ಲೀಯ ಗುಣವನ್ನು ಹೊಂದಿರುತ್ತದೆ.
ಈ ಮಾಹಿತಿಯ ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.
ಬಿಡದೇ ಕಾಡುವ ಕೆಮ್ಮು ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು
Canva
ಮುಂದಿನ ಸ್ಟೋರಿ ಕ್ಲಿಕ್ ಮಾಡಿ