ಪಪ್ಪಾಯದ ಜೊತೆ ಈ ಆಹಾರಗಳನ್ನು ಎಂದಿಗೂ ತಿನ್ನಬೇಡಿ, ಆರೋಗ್ಯಕ್ಕೆ ತೊಂದರೆ ತಪ್ಪಿದ್ದಲ್ಲ
pixa bay
By Reshma Apr 29, 2024
Hindustan Times Kannada
ಪಪ್ಪಾಯ ತಿನ್ನುವುದು ಹಲವರಿಗೆ ಇಷ್ಟ. ಈ ಬಿರು ಬೇಸಿಗೆಯಲ್ಲಿ ಫ್ರಿಜ್‌ನಲ್ಲಿಟ್ಟ ತಣ್ಣನೆಯ ಪಪ್ಪಾಯವನ್ನು ತಿನ್ನಲು ದೇಹ, ಮನಸ್ಸು ಬಯಸುತ್ತದೆ. ಪಪ್ಪಾಯ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮ. ಆದರೆ ಇದರ ಜೊತೆ ತಪ್ಪಿಯೂ ಈ ಕೆಲವು ಆಹಾರಗಳನ್ನು ತಿನ್ನಬಾರದು.
pixa bay
ಬೇಸಿಗೆಯಲ್ಲಿ ಮಲಬದ್ಧತೆಯನ್ನು ತಡೆಯಲು ಪಪ್ಪಾಯ ಸೇವಿಸುತ್ತಾರೆ. ಕೆಲವರು ಮಧ್ಯಾಹ್ನದ ಊಟದ ನಂತರ ಪಪ್ಪಾಯಿಯನ್ನು ಸೇವಿಸಿದರೆ ಇನ್ನು ಕೆಲವರು ಸಂಜೆ ಹೊತ್ತು ಈ ಹಣ್ಣನ್ನು ತಿನ್ನುತ್ತಾರೆ.
pixa bay
ದೇಹಕ್ಕೆ ಹಲವು ಪ್ರಯೋಜನಗಳನ್ನು ನೀಡುವ ಪಪ್ಪಾಯದ ಜೊತೆಗೆ ಯಾವ ಆಹಾರಗಳನ್ನು ತಿನ್ನಬಾರದು ನೋಡಿ.
pixa bay
ಪಪ್ಪಾಯದೊಂದಿಗೆ ಹೆಚ್ಚು ಪ್ರೊಟೀನ್ ಅಂಶ ಇರುವ ಆಹಾರಗಳನ್ನು ಸೇವಿಸದೇ ಇರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.
Pixabay
ಹಾಗಾಗಿ ಪ್ರೊಟೀನ್ ಸಮೃದ್ಧವಾಗಿರುವ ಮೀನು, ಮಾಂಸ ಹಾಗೂ ಮೊಟ್ಟೆಯ ಜೊತೆಗೆ ಪಪ್ಪಾಯ ಹಣ್ಣುಗಳನ್ನು ತಿನ್ನಬಾರದು. ಇದರಿಂದ ಹೊಟ್ಟೆ ಕೆಡುತ್ತದೆ.
pixa bay
ಪಪ್ಪಾಯದೊಂದಿಗೆ ನಿಂಬೆರಸ ತಪ್ಪಿಯೂ ಸೇವಿಸಬಾರದು. ಸಲಾಡ್ ತಿನ್ನುವಾಗ ಪಪ್ಪಾಯ ಸೇರಿಸಿದ್ದರೆ ಅದಕ್ಕೆ ನಿಂಬೆರಸ ಬೆರೆಸಬಾರದು. ಇದರಿಂದ ಹಿಮೋಗ್ಲೋಬಿನ್ ಕೊರತೆ ಉಂಟಾಗಬಹುದು. ಕಿತ್ತಳೆ ಹಾಗೂ ಪಪ್ಪಾಯ ಕೂಡ ಒಟ್ಟಿಗೆ ತಿನ್ನಬಾರದು.
pixa bay
ಬೇಸಿಗೆಯಲ್ಲಿ ಎಲ್ಲರೂ ಮಜ್ಜಿಗೆ, ಮೊಸರು ಸೇವಿಸಲು ಇಷ್ಟಪಡುತ್ತಾರೆ. ಆದರೆ ಪಪ್ಪಾಯದೊಂದಿಗೆ ಮೊಸರು ಸೇವಿಸಲೇಬಾರದು. ಮೊಸರು ಮಾತ್ರವಲ್ಲ ಯಾವುದೇ ಡೇರಿ ಉತ್ಪನ್ನವನ್ನು ಮೊಸರಿನ ಜೊತೆ ತಿನ್ನಬಾರದು. ಇದರಿಂದ ಜೀರ್ಣಕಾರಿ ಸಮಸ್ಯೆಗಳು ಎದುರಾಗಬಹುದು.
pixa bay
ಮಲಬದ್ಧತೆಯನ್ನು ನಿವಾರಿಸಲು ಪಪ್ಪಾಯಿ ಮತ್ತು ಕಿವಿ ಫ್ರೂಟ್ ಅನ್ನು ಹೆಚ್ಚು ಸೇವಿಸುತ್ತಾರೆ. ಆದರೆ ಕಿವಿ ಹಾಗೂ ಪಪ್ಪಾಯವನ್ನು ಒಟ್ಟಿಗೆ ಸೇವಿಸುವುದು ಖಂಡಿತ ಒಳ್ಳೆಯದಲ್ಲ.
pixa bay
ಪಪ್ಪಾಯದ ಜೊತೆಗೆ ಕ್ರೀಮ್, ಚೀಸ್ ಹಾಗೂ ಕೊಬ್ಬಿನ ಆಹಾರಗಳನ್ನು ಸೇವಿಸುವುದು ಅಪಾಯಕಾರಿ. ಇದರಿಂದ ಹೊಟ್ಟೆನೋವು ಉಂಟಾಗಬಹುದು. ಹಾಗಾಗಿ ಪಪ್ಪಾಯದ ಜೊತೆ ಈ ಮೇಲೆ ತಿಳಿಸಿದ ಯಾವುದೇ ಆಹಾರಗಳನ್ನೂ ಸೇವಿಸಬೇಡಿ.