ಹೈ ಬಿಪಿ ಇರೋರು ಟೀ ಕುಡಿದ್ರೆ ಏನಾಗುತ್ತೆ? ಇಲ್ಲಿದೆ ಉತ್ತರ
By Reshma Aug 24, 2024
Hindustan Times Kannada
ಇತ್ತೀಚಿನ ದಿನಗಳಲ್ಲಿ ಅಸರ್ಮಪಕ ಆಹಾರ ಪದ್ಧತಿ ಮತ್ತು ಅನಿಯಮಿತ ದೈನಂದಿನ ದಿನಚರಿಯ ಕಾರಣದಿಂದಾಗಿ ಹಲವರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದಾರೆ
ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ಸರಿಪಡಿಸದಿದ್ದರೆ ಹಾಗೂ ಬಿಪಿ ಸಮತೋಲನದಲ್ಲಿಲ್ಲ ಎಂದರೆ ಹೃದ್ರೋಗ, ಮೆದುಳಿನ ರಕ್ತಸ್ರಾವ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ತಮ್ಮ ರಕ್ತದೊತ್ತಡವನ್ನು ಸಮತೋಲನದಲ್ಲಿ ಇರಿಸಲು ಆಹಾರಕ್ರಮದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಲಾಗುತ್ತದೆ
ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಯಾವ ಆಹಾರ ಸೇವಿಸಬೇಕು, ಯಾವುದನ್ನು ತಿನ್ನಬಾರದು ಎಂಬ ಬಗ್ಗೆ ಜಿಜ್ಞಾಸೆ ಇರುವುದು ಸಹಜ
ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಟೀ ಕುಡಿಯಬೇಕೇ ಬೇಡವೇ ಎಂಬ ಬಗ್ಗೆ ಹಲವರಲ್ಲಿ ಗೊಂದಲವಿದೆ. ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ನೋಡಿ
ಆರೋಗ್ಯ ತಜ್ಞರ ಪ್ರಕಾರ ರಕ್ತದೊತ್ತಡ ರೋಗಿಗಳು ಗ್ರೀನ್ ಟೀ ಕುಡಿಯುವುದು ಪ್ರಯೋಜನಕಾರಿ
ಗ್ರೀನ್ ಟೀ ಕುಡಿಯವುದು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲ. ಇದು ಕ್ಯಾಲೊರಿ ಬರ್ನ್ ಮಾಡಲು ಸಹಾಯ ಮಾಡುತ್ತದೆ ಒಟ್ಟಾರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ
ಆರೋಗ್ಯ ತಜ್ಸರ ಪ್ರಕಾರ ಅಧಿಕ ರಕ್ತದೊತ್ತಡ ರೋಗಿಗಳಿಗೆ ಹಾಲು ಸೇರಿಸಿದ ಚಹಾ ಸೇವಿಸುವುದು ಪ್ರಯೋಜನಕಾರಿಯಲ್ಲ
ಹಾಲು ಬೆರೆಸಿದ ಚಹಾ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟದಲ್ಲಿ ಏರಿಕೆಯಾಗಬಹುದು. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ
ಆರೋಗ್ಯ ತಜ್ಞರ ಪ್ರಕಾರ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ಹಾಲು ಸೇರಿಸಿ ತಯಾರಿಸಿದ ಚಹಾ ಕುಡಿಯುವುದರಿಂದ ಹೃದಯರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚುವಂತೆ ಆಗಬಹುದು
ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ