ನಿದ್ದೆ ಬಾರದೇ ಪರದಾಡ್ತೀರಾ, ಉತ್ತಮ ನಿದ್ರೆಗೆ ಈ 5 ಅಭ್ಯಾಸಗಳನ್ನು ರೂಢಿಸಿಕೊಳ್ಳಿ
By Reshma
May 21, 2024
Hindustan Times
Kannada
ನಾವು ದೈಹಿಕವಾಗಿ ಫಿಟ್ ಆಗಿರಲು ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಬಹಳ ಅವಶ್ಯ.
ಆದರೆ ಇತ್ತೀಚಿನ ದಿನಗಳಲ್ಲಿ ಹಲವರು ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಾರೆ. ಒತ್ತಡ ಹಾಗೂ ಇತರ ಕಾರಣಗಳಿಂದ ಉತ್ತಮ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.
ನಿದ್ದೆ ಬಾರದೇ ಒದ್ದಾಡುವವರಲ್ಲಿ ನೀವೂ ಒಬ್ಬರಾಗಿದ್ದರೆ, ಈ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬಹುದು.
ಈ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಉತ್ತಮ ಹಾಗೂ ಆಳವಾದ ನಿದ್ದೆ ನಿಮ್ಮನ್ನು ಆವರಿಸುತ್ತದೆ.
ಆರೋಗ್ಯ ತಜ್ಞರ ಪ್ರಕಾರ ರಾತ್ರಿ ಉತ್ತಮ ನಿದ್ದೆ ಪಡಿಬೇಕು ಅಂದ್ರೆ ಬೆಳಿಗ್ಗೆ ಬೇಗ ಏಳಬೇಕು. ಬೆಳಿಗ್ಗೆ ಎದ್ದು ಸೂರ್ಯ ನಮಸ್ಕಾರ ಮಾಡಬೇಕು.
ಸೂರ್ಯ ನಮಸ್ಕಾರ ಮಾಡುವುದರಿಂದ ದೇಹದ ಕಾರ್ಟಿಸೋಲ್ ಮತ್ತು ಮೆಲಟೊನಿನ್ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಉತ್ತಮ ನಿದ್ದೆ ಪಡೆಯಲು ಸರಿಯಾದ ಸಮಯಕ್ಕೆ ಊಟ ಮಾಡುವುದು ಕೂಡ ಮುಖ್ಯವಾಗುತ್ತದೆ. ಮಲಗಲು ಎರಡು ಗಂಟೆ ಮೊದಲು ಊಟ ಸೇವಿಸಿದರೆ ಚೆನ್ನಾಗಿ ನಿದ್ದೆ ಬರುತ್ತದೆ.
ಉತ್ತಮ ನಿದ್ದೆಗೆ ಕೆಫಿನ್ ಅಂಶ ಇರುವ ಚಹಾ ಕಾಫಿಯಂತಹ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಬೇಕು.
ನಿದ್ರಾಹೀನತೆಗೆ ಒತ್ತಡವೂ ಒಂದು ಪ್ರಮುಖ ಕಾರಣ. ಉತ್ತಮ ನಿದ್ದೆಗೆ ನಿಮ್ಮ ದೈನಂದಿನ ದಿನಚರಿಯನ್ನು ನಿಯಮಿತವಾಗಿರಿಸಿಕೊಳ್ಳಿ. ಕಷ್ಟಪಟ್ಟು ಕೆಲಸ ಮಾಡಿ, ಧನಾತ್ಮಕವಾಗಿ ಯೋಚಿಸಿ.
ಈ 5 ಅಭ್ಯಾಸಗಳನ್ನು ನಿರಂತರವಾಗಿ ರೂಢಿಸಿಕೊಳ್ಳುವ ಮೂಲಕ ನಿದ್ದೆಯ ಸಮಸ್ಯೆಗೆ ಕಡಿವಾಣ ಹಾಕಬಹುದು.
ವಿಶ್ವದ ಅತ್ಯಂತ ಹಳೆಯ ನಗರಗಳು
ಇಂದಿಗೂ ಜನವಸತಿ ಇರುವ 5 ಪ್ರಾಚೀನ ನಗರಗಳಿವು
UNSPLASH, HOW STUFF WORKS
ಮುಂದಿನ ಸ್ಟೋರಿ ಕ್ಲಿಕ್ ಮಾಡಿ