ಅಡುಗೆಯ ಘಮ ಹೆಚ್ಚಿಸುವ ಅನಾನಸ್‌ ಮೊಗ್ಗಿನಿಂದ ಆರೋಗ್ಯಕ್ಕಿದೆ ಇಷ್ಟೊಂದು ಪ್ರಯೋಜನ

pixa bay

By Reshma
Aug 07, 2024

Hindustan Times
Kannada

ಬಿರಿಯಾನಿ, ಪಲಾವ್‌ನಂತಹ ರುಚಿಕರ ಖಾದ್ಯಗಳ ಘಮ ಹೆಚ್ಚಿಸುವ ಅನಾನಸ್‌ ಮೊಗ್ಗು ಹಲವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿದೆ. ಇದನ್ನು ಇಂಗ್ಲಿಷ್‌ನಲ್ಲಿ ಸ್ಟಾರ್‌ ಅನಿಸ್‌ ಎಂದೂ ಕರೆಯುತ್ತಾರೆ. 

pixa bay

ಸಾಮಾನ್ಯವಾಗಿ ಅಡುಗೆ ಖಾದ್ಯಗಳ ರುಚಿ ಹೆಚ್ಚಿಸುವ ಅನಾನಸ್‌ ಮೊಗ್ಗನ್ನು ಭಾರತದ ಸಾಂಪ್ರದಾಯಿಕ ಅಡುಗೆ ತಯಾರಿಯಲ್ಲೂ ಬಳಸುತ್ತಾರೆ.

pixa bay

ಸಾಂಬಾರ್‌ ಡಬ್ಬಿಯಲ್ಲಿ ಜೀರಿಗೆ, ಸಾಸಿವೆ, ಬೆಳ್ಳುಳ್ಳಿ ಇರುವಂತೆ ಅನಾನಸ್‌ ಮೊಗ್ಗಿಗೂ ಪ್ರಾಮುಖ್ಯ ನೀಡಲಾಗುತ್ತದೆ. ಇದು ಅಡುಗೆಗಷ್ಟೇ ಅಲ್ಲಾ ಆರೋಗ್ಯಕ್ಕೂ ಬೇಕು. 

ಅನಾನಸ್‌ ಮೊಗ್ಗಿನಲ್ಲಿ ಆಂಟಿಆಕ್ಸಿಡೆಂಟ್‌, ವಿಟಮಿನ್‌ ಎ ಹಾಗೂ ವಿಟಮಿನ್‌ ಸಿ ಅಂಶಗಳಿದ್ದು ಈ ಪೋಷಕಾಂಶಗಳು ದೇಹಕ್ಕೆ ಅಗತ್ಯವಾಗಿದೆ. ಇದು ಜೀರ್ಣಕ್ರಿಯೆಗೂ ಉತ್ತಮ. 

Pexels

ಅನಾನಸ್‌ ಮೊಗ್ಗಿನಲ್ಲಿ ಕ್ಯಾಲೊರಿ ಕಡಿಮೆ ಇರುವುದರಿಂದ ಬೊಜ್ಜಿನ ಸಮಸ್ಯೆ ಇರುವವರು ಇದನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಅನಿಯಮಿತ ಮುಟ್ಟಿನ ಸಮಸ್ಯೆ ಇರುವವರು ಇದನ್ನು ಸೇವಿಸುವುದು ಉತ್ತಮ. ಜ್ವರ, ಮೈಕೈ ನೋವು, ಗ್ಯಾಸ್ಟಿಕ್‌ ಸಮಸ್ಯೆ ನಿವಾರಣೆಗೂ ಇದು ಉತ್ತಮ. 

pixa bay

ಮುಟ್ಟಿನ ಸಮಸ್ಯೆಗಳ ನಿವಾರಣೆಗೆ ಅನಾನಸ್‌ ಮೊಗ್ಗು ಉತ್ತಮ. ಮಕ್ಕಳನ್ನು ಕಾಡುವ ಅಜೀರ್ಣ ಸಮಸ್ಯೆಯನ್ನೂ ನಿವಾರಿಸುತ್ತದೆ. ಹೃದಯದ ತೊಂದರೆ, ಬಾಯಿ ದುರ್ವಾಸನೆ, ಶ್ವಾಸಕೋಶದ ತೊಂದರೆ, ನೆಗಡಿ, ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೂ ಇದು ಮದ್ದು. 

pixa bay

ಇದು ಕ್ಯಾನ್ಸರ್‌ಗೆ ಕಾರಣವಾಗುವ ಫ್ರಿ ರಾಡಿಕಲ್ಸ್‌ಗಳನ್ನೂ ದೇಹದಿಂದ ಹೊರ ಹಾಕುತ್ತದೆ. ಎದೆಹಾಲು ಹೆಚ್ಚಲು ಕೂಡ ಅನಾನಸ್‌ ಮೊಗ್ಗು ಉತ್ತಮ

pixa bay

ಮುಟ್ಟಿನ ಸಮಸ್ಯೆ ನಿವಾರಣೆಗೆ ಔಷಧಿ ತಯಾರಿಸಲು: ಅನಾನಸ್ ಮೊಗ್ಗು, ಆಲೊವೆರಾ ಪುಡಿ, ತಾಳೆ ಬೆಲ್ಲ ಇವಿಷ್ಟೂ ಬೇಕು. 

pixa bay

ತಯಾರಿಸುವ ವಿಧಾನ: ಒಂದು ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ತಾಳೆ ಬೆಲ್ಲ ಸೇರಿಸಿ. ಅದಕ್ಕೆ ತರಿತರಿಯಾಗಿ ಪುಡಿ ಮಾಡಿದ ಅನಾನಸ್‌ ಮೊಗ್ಗು ಸೇರಿಸಿ. ಅದಕ್ಕೆ ಆಲೊವೆರಾ ಪುಡಿ ಸೇರಿಸಿ, ಚೆನ್ನಾಗಿ ಕುದಿಸಿ. 

pixa bay

ಇದನ್ನು ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ಮುಟ್ಟಿನ ಸಮಸ್ಯೆ ನಿವಾರಣೆಯಾಗುತ್ತದೆ ಹಾಗೂ ಮುಟ್ಟು ನಿಯಮಿತವಾಗಿ ಆಗುತ್ತದೆ.

pixa bay

ಅಜೀರ್ಣದ ಸಮಸ್ಯೆಗೂ ಇದು ಪರಿಹಾರವಾಗಿದೆ. ಮಕ್ಕಳ ಕರುಳಿನ ಹುಳುಗಳ ನಿವಾರಣೆಗೂ ಇದು ಉತ್ತಮ.

pixa bay

ನಿಮ್ಮ ಹಲ್ಲುಜ್ಜುವ ಬ್ರಷ್ ಹೇಗಿರಬೇಕು? ಗುಣಮಟ್ಟ ಹೇಗಿರಬೇಕು ಎಂಬ ಮಾಹಿತಿ ಇಲ್ಲಿದೆ