ಈ 6 ಸಮಸ್ಯೆ ಇರುವವರು ತಪ್ಪಿಯೂ ಕಬ್ಬಿನ ಜ್ಯೂಸ್‌ ಕುಡಿಯಬಾರದು 

By Reshma
May 16, 2024

Hindustan Times
Kannada

ಬೇಸಿಗೆಯಲ್ಲಿ ಕಬ್ಬಿನ ಜ್ಯೂಸ್‌ ಕುಡಿಯುವುದು ಆರೋಗ್ಯಕ್ಕೆ ಬಹಳ ಉತ್ತಮ. ಇದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುವ ಕಾರಣ ಇದು ಸರ್ವರೋಗಕ್ಕೂ ಮದ್ದು ಎನ್ನಲಾಗುತ್ತದೆ. 

ಕಬ್ಬಿನರಸದಲ್ಲಿ ಹಲವು ಪೋಷಕಾಂಶಗಳಿದ್ದರೂ ಕೆಲವು ಸಮಸ್ಯೆ ಇರುವವರು ಇದನ್ನು ಕುಡಿಯಬಾರದು ಎಂದು ಹೇಳಲಾಗುತ್ತದೆ. 

ಕಬ್ಬಿನ ರಸ ಯಾರು ಕುಡಿಯಬಾರದು, ಯಾರಿಗೆ ಇದು ಅಪಾಯಕಾರಿ ಎಂಬುದನ್ನು ನೋಡೋಣ.

ಕಬ್ಬಿನ ರಸದಲ್ಲಿ ಕ್ಯಾಲೊರಿ ಅಂಶ ಹೆಚ್ಚಿರುತ್ತದೆ. ಇದು ತೂಕ ಏರಿಕೆಯಾಗಲು ಕಾರಣವಾಗುತ್ತದೆ. ನೀವು ಸ್ಥೂಲಕಾಯದ ಸಮಸ್ಯೆಯಿಂದ ಬಳಲುತ್ತಿದ್ದರೆ, ತೂಕ ಕಳೆದುಕೊಳ್ಳಲು ಬಯಸಿದರೆ ಕಬ್ಬಿನ ರಸ ಕುಡಿಯದೇ ಇರುವುದು ಉತ್ತಮ.

ಕಬ್ಬಿನರಸವು ಪೋಲಿಕೋಸನಾಲ್‌ ಎಂಬ ಅಂಶವನ್ನು ಹೊಂದಿರುತ್ತದೆ. ಇದು ನಿದ್ರಾಹೀನತೆಗೆ ಪ್ರಮುಖ ಕಾರಣವಾಗುತ್ತದೆ. ಹಾಗಾಗಿ ನಿದ್ದೆಯ ಸಮಸ್ಯೆ ಇರುವವರು ಕಬ್ಬಿನ ರಸ ಸೇವಿಸಬಾರದು. 

ನೀವು ರಕ್ತಪರೀಕ್ಷೆ ಮಾಡಿಸಿದ್ದು, ನಿಮ್ಮ ರಕ್ತ ತೆಳುವಾಗಿದೆ ಎಂದು ಕಂಡುಬಂದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಕಬ್ಬಿನ ರಸ ಕುಡಿಯಬಾರದು. ಕಬ್ಬಿನ ರಸದಲ್ಲಿರುವ ಪೋಲಿಕೋಸನಾಲ್‌ ರಕ್ತವನ್ನು ಹೆಚ್ಚು ತೆಳುವಾಗಿಸುತ್ತದೆ. 

ಕಬ್ಬಿನರಸದಲ್ಲಿ ಸಾಕಷ್ಟು ಸಕ್ಕರೆ ಅಂಶ ಇರುವುದರಿಂದ ಮಧುಮೇಹಿಗಳು ಸಕ್ಕರೆ ರಸ ಕುಡಿಯುವುದನ್ನು ತಪ್ಪಿಸಬೇಕು. 

ಶೀತ, ನೆಗಡಿ ಸಮಸ್ಯೆ ಇರುವವರು ತಪ್ಪಿಯೂ ಕಬ್ಬಿನರಸ ಕುಡಿಯಬಾರದು. ಇದರಿಂದ ಸಮಸ್ಯೆ ಹೆಚ್ಚಾಗಬಹುದು. 

ಹಲ್ಲು, ವಸಡಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವವರು ಕಬ್ಬಿನ ರಸ ಕುಡಿಯಬಾರದು. 

ಈ ಸುದ್ದಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ.  

ರೇಷ್ಮೆಯಂತೆ ನುಣುಪಾದ ಕೇಶರಾಶಿ ನಿಮ್ಮದಾಗಲು ಮನೆಯಲ್ಲೇ ತಯಾರಿಸಿದ ಈ ಹೇರ್‌ಮಾಸ್ಕ್‌ ಬಳಸಿ