ಆರೋಗ್ಯ ವೃದ್ಧಿಸುವ 5 ಆಹಾರಗಳಿವು, ಬೇಸಿಗೆಗೆ ಮೊದಲು ತಪ್ಪದೆ ಸೇವಿಸಿ

By Reshma
Feb 25, 2024

Hindustan Times
Kannada

ಚಳಿಗಾಲ ಮುಕ್ತಾಯವಾಗಿ ವಸಂತ ಕಾಲದ ಆರಂಭದಲ್ಲಿ ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿರಬಹುದು. ಇದಕ್ಕೆ ಕಾರಣ ತಾಪಮಾನದಲ್ಲಿನ ಹಠಾತ್‌ ಬದಲಾವಣೆ. ಈ ಸಮಯದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಈ ಆಹಾರಗಳನ್ನು ತಪ್ಪದೇ ಸೇವಿಸಬೇಕು. 

ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಆಂಟಿಬ್ಯಾಕ್ಟೀರಿಯಲ್‌ ಗುಣಗಳು ಸಮೃದ್ಧವಾಗಿರುತ್ತದೆ. ಇದು ಸೋಂಕನ್ನು ತಡೆಗಟ್ಟಿ ರೋಗ ಹರಡುವುದನ್ನು ನಿಯಂತ್ರಿಸುತ್ತದೆ. ಅಲ್ಲದೇ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ.

ಶುಂಠಿ: ಆಂಟಿಬ್ಯಾಕ್ಟೀರಿಯಲ್‌ ಹಾಗೂ ಆಂಟಿವೈರಲ್‌ ಗುಣಲಕ್ಷಣಗಳ ಶಕ್ತಿಕೇಂದ್ರವಾಗಿದೆ. ಇದು ಸೋಂಕುಗಳ ವಿರುದ್ಧ ದೇಹವನ್ನು ರಕ್ಷಿಸುತ್ತದೆ. 

ಬೆರಿ ಹಣ್ಣುಗಳು: ಬ್ಲೂಬೆರಿ, ಸ್ಟ್ರಾಬೆರಿ, ರಸ್‌ಬೆರಿಯಂತಹ ಹಣ್ಣುಗಳು ಆಂಟಿಆಕ್ಸಿಡೆಂಟ್‌ ಅಂಶಗಳಿಂದ ಸಮೃದ್ಧವಾಗಿದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. 

ಒಣಹಣ್ಣುಗಳು: ಬಾದಾಮಿ, ವಾಲ್‌ನಟ್‌, ಗೋಡಂಬಿ, ಕುಂಬಳಕಾಯಿ ಬೀಜ, ಚೀಯಾ ಸೀಡ್‌ನಂತಹ ಒಣಹಣ್ಣುಗಳು ಹಾಗೂ ಬೀಜಗಳು ವಿಟಮಿನ್‌ ಇ, ಝಿಂಕ್, ಆರೋಗ್ಯಕರ ಕೊಬ್ಬಿನಾಂಶ ಹೊಂದಿದ್ದು, ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ. 

ಮುಂಬೈ ಇಂಡಿಯನ್ಸ್ ತಂಡದ ಗ್ಲಾಮರಸ್‌ ಮಾಲಕಿ