ಬೇಸಿಗೆಯಲ್ಲಿ ಪ್ರತಿದಿನ ಬೇಲದ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದಾಗುವ 7 ಅದ್ಭುತ ಪ್ರಯೋಜನಗಳಿವು

By Reshma
Apr 12, 2024

Hindustan Times
Kannada

ಬೇಲದ ಹಣ್ಣಿನಲ್ಲಿ ಪ್ರೊಟೀನ್‌, ವಿಟಮಿನ್‌ ಸಿ, ಕ್ಯಾಲ್ಸಿಯಂ, ರಂಜಕ, ಕಬ್ಬಿಣಾಂಶ, ಥಯಾಮಿನ್‌ ಹಾಗೂ ನಾರಿನಾಂಶ ಸಮೃದ್ಧವಾಗಿರುತ್ತದೆ. ಇದು ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. 

ಬೇಸಿಗೆಯಲ್ಲಿ ಮರಸೇಬು ಅಥವಾ ಬೇಲದ ಹಣ್ಣಿನ ರಸವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ನೂರಾರು ಪ್ರಯೋಜನಗಳಿವೆ. 

ಬೇಲದ ಹಣ್ಣಿನ ರಸ ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಅಜೀರ್ಣ, ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆ ಕಾಡುತ್ತಿದ್ದರೆ ನೀವು ಬೇಲದ ಹಣ್ಣಿನ ಜ್ಯೂಸ್‌ ಮಾಡಿ ಕುಡಿಯಬಹುದು. 

ಬೇಲದ ಹಣ್ಣಿನಲ್ಲಿ ವಿಟಮಿನ್‌ ಸಿ ಅಂಶ ಹೇರಳವಾಗಿರುತ್ತದೆ. ಇದು ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ಕೂಡ ಸಹಕಾರಿ. 

ಬೇಲದ ಹಣ್ಣಿನಲ್ಲಿ ಕಂಡುಬರುವ ಕ್ಯಾಲ್ಸಿಯಂ ಅಂಶವು ಮೂಳೆಗಳನ್ನು ಸದೃಢಗೊಳಿಸುತ್ತದೆ ಹಾಗೂ ಇದು ಕೀಲುನೋವಿನ ಸಮಸ್ಯೆ ಪರಿಹಾರಕ್ಕೂ ಉತ್ತಮ. 

ಬೇಸಿಗೆಯಲ್ಲಿ ಬೇಲದ ಹಣ್ಣಿನ ರಸವನ್ನು ಪ್ರತಿದಿನ ಸೇವಿಸುವುರಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ. ಇದನ್ನು ಸೇವಿಸುವುದರಿಂದ ಆಯಾಸ, ದೌರ್ಬಲ್ಯ ನಿವಾರಣೆಯಾಗುತ್ತದೆ. 

ದೇಹದಲ್ಲಿ ಅತಿಯಾದ ತಾಪಮಾನದಿಂದ ದೇಹವನ್ನು ರಕ್ಷಿಸಿಕೊಳ್ಳಲು ಬೇಲದ ಹಣ್ಣಿನ ಜ್ಯೂಸ್‌ ಕುಡಿಯವುದು ಉತ್ತಮ. 

ಬೇಲದ ಹಣ್ಣಿನಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕ ಅಂಶಗಳು ಚರ್ಮದ ಕೋಶಗಳನ್ನು ಆರೋಗ್ಯವಾಗಿ ಇರಿಸುವಂತೆ ಮಾಡುತ್ತವೆ. ತ್ವಚೆಯ ಹೊಳಪು ಹೆಚ್ಚಲು ಇದು ಸಹಕಾರಿ. 

ಪ್ರತಿದಿನ ಬೇಲದ ಹಣ್ಣಿನ ರಸ ಕುಡಿಯುವುದರಿಂದ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿರುತ್ತದೆ. ಹೃದಯ ಆರೋಗ್ಯಕ್ಕೂ ಬೇಲದ ಹಣ್ಣು ಉತ್ತಮ. 

ಈ ಸುದ್ದಿ ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.

ಬಾಯ್​ಫ್ರೆಂಡ್ ಬರ್ತ್​​ಡೇಗೆ ಮುದ್ದಾಗಿ ಶುಭಕೋರಿದ ಸ್ಮೃತಿ ಮಂಧಾನ