ಬೇಸಿಗೆಯಲ್ಲಿ ಡೀಹೈಡ್ರೇಷನ್‌ ಆಗುವುದನ್ನು ತಪ್ಪಿಸಲು ಈ ಸರಳ ಸಲಹೆಗಳನ್ನು ಪಾಲಿಸಿ 

By Reshma
Apr 18, 2024

Hindustan Times
Kannada

ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾಗುವುದು ಸಹಜ. ಹಾಗಾಗಿ ಈ ಋತುವಿನಲ್ಲಿ ನಾವು ಸೇವಿಸುವ ಆಹಾರಗಳ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. 

ದೇಹವನ್ನು ನಿರ್ಜಲೀಕರಣದಿಂದ ಕಾಪಾಡಲು ಇರುವ ಪ್ರಮುಖ ದಾರಿ ಎಂದರೆ ಸಾಕಷ್ಟು ನೀರು ಕುಡಿಯುವುದು. ಬಾಯಾರಿಕೆ ಇಲ್ಲದೇ ಇದ್ದರೂ ನೀರು ಕುಡಿಯುತ್ತಲೇ ಇರಬೇಕು. 

ನೀರಿನಾಂಶ ಇರುವ ಹಣ್ಣು, ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ನೀಡಿ. ಕಲ್ಲಂಗಡಿ, ಸೌತೆಕಾಯಿ, ಕರ್ಜೂರ, ಕಿತ್ತಳೆಯಂತಹ ಹಣ್ಣನ್ನು ಹೆಚ್ಚು ಸೇವಿಸಿ.

ಬೇಸಿಗೆಯ ನಿರ್ಜಲೀಕರಣ ಸಮಸ್ಯೆ ತಪ್ಪಿಸಲು ಸೌತೆಕಾಯಿ ಉತ್ತಮ ಪರಿಹಾರ. ಇದರಲ್ಲಿ ನೀರಿನಾಂಶದ ಜೊತೆಗೆ ನಾರಿನಾಂಶವೂ ಸಮೃದ್ಧವಾಗಿದೆ. ಇದು ದೇಹದಲ್ಲಿ ತೇವಾಂಶ ಹೆಚ್ಚಿಸುವ ಜೊತೆಗೆ ಜೀರ್ಣಕ್ರಿಯೆಯನ್ನೂ ವೃದ್ಧಿಸುತ್ತದೆ. 

ದೇಹದಲ್ಲಿ ನೀರಿನಾಂಶ ಕೊರತೆ ನೀಗಿಸಲು ಪ್ರತಿದಿನ ಕಲ್ಲಂಗಡಿ ಹಣ್ಣಿನ ಸೇವನೆಯನ್ನು ರೂಢಿಸಿಕೊಳ್ಳುವುದು ಉತ್ತಮ.

ಬೇಸಿಗೆಯಲ್ಲಿ ಅತಿಯಾದ ಸೂರ್ಯನ ತಾಪ ಹಾಗೂ ನಿರ್ಜಲೀಕರಣ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಎಳನೀರು ಕುಡಿಯಬೇಕು. ಇದರಲ್ಲಿ ದೇಹಕ್ಕೆ ಅಗತ್ಯ ಪೋಷಕಾಂಶಗಳಿದ್ದು, ಆರೋಗ್ಯಕ್ಕೂ ಉತ್ತಮ. 

ಕಲ್ಲಂಗಡಿ ಹಣ್ಣಿನಂತೆ ಬೇಸಿಗೆಯಲ್ಲಿ ಪ್ರತಿನಿತ್ಯ ಕಿತ್ತಳೆ ಹಣ್ಣು ತಿನ್ನುವ ಮೂಲಕ ನಿರ್ಜಲೀಕರಣ ಉಂಟಾಗದಂತೆ ನೋಡಿಕೊಳ್ಳಬಹುದು. 

ಸ್ಟ್ರಾಬೆರಿ ಸೇವನೆ ಕೂಡ ನಿರ್ಜಲೀಕರಣವನ್ನು ತಪ್ಪಿಸಿ, ತ್ವಚೆಯ ಹೊಳಪು ಹೆಚ್ಚುವಂತೆ ಮಾಡುತ್ತದೆ. 

ಸೊಪ್ಪು, ತರಕಾರಿಗಳಲ್ಲೂ ನೀರಿನಾಂಶವಿದ್ದು ಇದರ ಸೇವನೆಯಿಂದ ನಿರ್ಜಲೀಕರಣದ ಸಮಸ್ಯೆ ನಿವಾರಣೆಯಾಗುವ ಜೊತೆಗೆ ಆರೋಗ್ಯವೂ ಸುಧಾರಿಸುತ್ತದೆ. 

ಈ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞ ವೈದ್ಯರನ್ನು ಸಂಪರ್ಕಿಸಿ.

ಬಾಸಿಂಗ ತೊಟ್ಟ ಶ್ರಾವಣಿ; ಮದುಮಗಳ ಅಂದಕ್ಕೆ ಮನಸೋತ ವೀಕ್ಷಕರು