ಬೇಸಿಗೆಗೆ ಉಷ್ಣ ಹೆಚ್ಚಾಯ್ತಾ? ಈ 4 ಆಹಾರಗಳು ನಿಮ್ಮನ್ನು ಕೂಲ್ ಮಾಡುತ್ವೆ ನೋಡಿ

By Reshma
Apr 24, 2024

Hindustan Times
Kannada

ಬಿರು ಬಿಸಿಲಿನ ತಾಪ, ಉಷ್ಣಾಂಶ ಏರಿಕೆಯಾದಂತೆ ಬೇಸಿಗೆಯಲ್ಲಿ ಡೀಹೈಡ್ರೇಷನ್‌ ಸಮಸ್ಯೆ ಕಾಡಲು ಆರಂಭವಾಗುತ್ತದೆ. ಇದರೊಂದಿಗೆ ಶಾಖದ ಕಾರಣದಿಂದ ಕರುಳಿನ ಆರೋಗ್ಯವೂ ಹದಗೆಡುತ್ತದೆ. 

ನಾರಿನಾಂಶ ಹಾಗೂ ನೀರಿನಾಂಶ ಸಮೃದ್ಧವಾಗಿರುವ ಆಹಾರ ಪದಾರ್ಥಗಳು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಇದು ಜೀರ್ಣಕ್ರಿಯೆ ವೃದ್ಧಿಯಾಗಲು ಸಹಕಾರಿ. ಬೇಸಿಗೆಯಲ್ಲಿ ಹೊಟ್ಟೆ ತಣ್ಣಗಿರಲು ಸಹಾಯ ಮಾಡುವ ಆಹಾರ ಪದಾರ್ಥಗಳಿವು. 

ಸೌತೆಕಾಯಿ 

ಸೌತೆಕಾಯಿ ನೈಸರ್ಗಿಕವಾಗಿ ದೇಹವನ್ನು ತಣ್ಣಗಿರಿಸುತ್ತದೆ. ಇದು ದೇಹವನ್ನು ದೇಹದ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಅಲ್ಲದೇ ಜೀರ್ಣಕ್ರಿಯೆಗೂ ಉತ್ತಮ. 

ಪುದಿನಾ 

ಬೇಸಿಗೆಯಲ್ಲಿ ಪುದಿನಾವನ್ನು ತಮ್ಮ ಆಹಾರದೊಂದಿಗೆ ಸೇರಿಸಿಕೊಳ್ಳುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಇದು ದೇಹದ ಉರಿಯೂತ ನಿವಾರಣೆಗೆ ಸಹಾಯ ಮಾಡುತ್ತದೆ. ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. 

ಮೊಸರು 

ಪ್ರೊಬಯೋಟಿಕ್‌ ಅಂಶಗಳಿಂದ ಸಮೃದ್ಧವಾಗಿರುವ ಮೊಸರು ಅಥವಾ ಯೋಗರ್ಟ್‌ನಲ್ಲಿ ಕರುಳಿಗೆ ಉತ್ತಮ ಎನ್ನಿಸುವ ಬ್ಯಾಕ್ಟೀರಿಯಾಗಳಿವೆ. ಇದು ಜೀರ್ಣಕ್ರಿಯೆಯನ್ನು ವೃದ್ಧಿಸಿ ಹೊಟ್ಟೆಯ ಉಷ್ಣಾಂಶವನ್ನು ತಗ್ಗಿಸುತ್ತದೆ. 

ಎಳನೀರು 

ಎಳನೀರಿನಲ್ಲಿ ಎಲೆಕ್ಟ್ರೋಲೈಟ್‌ ಅಂಶ ಹೇರಳವಾಗಿದ್ದು ಇದು ದೇಹ ಹೈಡ್ರೇಟ್‌ ಆಗಿರುವಂತೆ ನೋಡಿಕೊಳುತ್ತದೆ. ಇದು ಕರುಳಿನ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಜೀರ್ಣಕ್ರಿಯೆ ಹೆಚ್ಚಲು ಇದು ಸಹಕಾರಿ. 

ಈ ಕನ್ನಡ ನಟಿ ಯಾರೆಂದು ಗುರುತಿಸಿ