ಬೇಸಿಗೆಯಲ್ಲಿ ಪ್ರತಿಯೊಬ್ಬರೂ ತಪ್ಪದೇ ಪಾಲಿಸಬೇಕಾದ 8 ನಿಯಮಗಳಿವು
By Reshma Apr 10, 2024
Hindustan Times Kannada
ಬೇಸಿಗೆಯ ಬಿಸಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅತಿಯಾದ ಬಿಸಿಲಿನಿಂದ ಚರ್ಮದ ಆರೋಗ್ಯ ಸೇರಿದಂತೆ ಸಂಪೂರ್ಣ ಆರೋಗ್ಯ ಹದಗೆಡುತ್ತಿದೆ. ಹಾಗಾಗಿ ಈ ಬೇಸಿಗೆಯಲ್ಲಿ ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು.
ಬೇಸಿಗೆಯಲ್ಲಿ ಮನೆಯಿಂದ ಹೊರಗಡೆ ಹೋಗುವಾಗ ತಪ್ಪದೇ ಸನ್‌ಸ್ಕ್ರೀನ್ ಲೋಷನ್ ಬಳಸಿ. ಎಸ್‌ಪಿಎಫ್ ಅಂಶ ಇರುವ ಸನ್‌ಸ್ಕ್ರೀನ್ ಆಯ್ಕೆ ಮಾಡಿ.
ಸಾಧ್ಯವಾದಷ್ಟು ಮದ್ಯಪಾನ ಮಾಡುವುದನ್ನು ತಪ್ಪಿಸಿ. ಮದ್ಯಪಾನದಿಂದ ಡೀಹೈಡ್ರೇಷನ್ ಸಮಸ್ಯೆ ಕಾಡಬಹುದು.
ದೇಹವನ್ನು ತಂಪಾಗಿ ಇರಿಸಿಕೊಳ್ಳಲು ಮರೆಯಬೇಡಿ. ದೇಹ ಹೈಡ್ರೇಟ್ ಆಗಿರುವುದು ಬಹಳ ಮುಖ್ಯ.
ದಿನದಲ್ಲಿ ಕನಿಷ್ಠ 4 ಲೀಟರ್ ನೀರು ಕುಡಿಯಿರಿ. ಹಣ್ಣಿನ ತಾಜಾ ಪಾನೀಯಗಳು, ನಿಂಬೆ ಪಾನಕ, ಮಜ್ಜಿಗೆ ಸೇವನೆಗೆ ಆದ್ಯತೆ ನೀಡಿ
ನೀರಿನಾಂಶ ಹೆಚ್ಚಿರುವ ಹಣ್ಣು, ತರಕಾರಿಗಳ ಸೇವನೆಗೆ ಆದ್ಯತೆ ನೀಡಿ.
ಟೋಫಿ ಅಥವಾ ಛತ್ರಿ ಇಲ್ಲದೇ ಹೊರಗಡೆ ಓಡಾಡುವುದನ್ನು ತಪ್ಪಿಸಿ.
ಮನೆಯಿಂದ ಹೊರಗಡೆ ಹೋಗುವಾಗ ತಪ್ಪದೇ ಕೂಲ್ ಗ್ಲಾಸ್ ಧರಿಸಿ.
ಶಾಖ ಹೀರಿಕೊಳ್ಳುವ ಹತ್ತಿ ಬಟ್ಟೆಯನ್ನೇ ಧರಿಸಿ. ತೆಳು ಬಣ್ಣದ ಗಾಳಿಯಾಡುವ ಬಟ್ಟೆಗಳಿಗೆ ಆದ್ಯತೆ ನೀಡಿ.
Tulsi Vivah; ಭಗವಾನ್ ವಿಷ್ಣು ತುಳಸಿಯನ್ನು ವಿವಾಹವಾಗಿದ್ದು ಏಕೆ