ಬೇಸಿಗೆಯಲ್ಲಿ ಈ 5 ಒಣಹಣ್ಣುಗಳನ್ನು ನೆನೆಸಿ ತಿಂದ್ರೆ ಆರೋಗ್ಯಕ್ಕುಂಟು ನೂರಾರು ಪ್ರಯೋಜನ
By Reshma May 10, 2024
Hindustan Times Kannada
ಬೇಸಿಗೆಯಲ್ಲಿ ಸೂರ್ಯನ ಶಾಖದಿಂದ ಮಾತ್ರವಲ್ಲ, ನಾವು ಸೇವಿಸುವ ಆಹಾರಗಳಿಂದಲೂ ದೇಹದ ಮೇಲೆ ಪರಿಣಾಮ ಉಂಟಾಗಬಹುದು. ಹಾಗಾಗಿ ಆಹಾರಗಳ ಮೇಲೆ ಸಾಕಷ್ಟು ಗಮನ ನೀಡುವುದು ಅವಶ್ಯ.
ಬೇಸಿಗೆಯಲ್ಲಿ ದೇಹದಲ್ಲಿ ಉಷ್ಣಾಂಶ ಹೆಚ್ಚಿಸುವ ಆಹಾರಗಳ ಸೇವನೆ ಒಳ್ಳೆಯದಲ್ಲ. ಆ ಕಾರಣಕ್ಕೆ ಬೇಸಿಗೆಗೆ ಒಣಹಣ್ಣುಗಳಲ್ಲ ಉತ್ತಮವಲ್ಲ ಎನ್ನುತ್ತಾರೆ. ಆದರೆ ಇವುಗಳು ಆರೋಗ್ಯಕ್ಕೆ ಅವಶ್ಯ ಎನ್ನುವುದು ಸುಳ್ಳಲ್ಲ.
ಒಣಹಣ್ಣುಗಳು ದೇಹದಲ್ಲಿ ಉಷ್ಣಾಂಶ ಹೆಚ್ಚಿಸಿದ್ರೂ ಇವುಗಳಲ್ಲಿ ಪೋಷಕಾಂಶ ಹೇರಳವಾಗಿರುತ್ತದೆ. ಆ ಕಾರಣಕ್ಕೆ ಬೇಸಿಗೆಯ ದಿನಗಳಲ್ಲಿ ಒಣಹಣ್ಣುಗಳನ್ನು ನೆನೆಸಿ ತಿನ್ನಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ಶಾಖ ಕಡಿಮೆಯಾಗಿ, ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ಸಿಗುತ್ತದೆ.
ಬೇಸಿಗೆಕಾಲದಲ್ಲಿ ಈ ಒಣಹಣ್ಣುಗಳನ್ನು ನೆನೆಸಿ ತಿನ್ನುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಹಾಗಾದರೆ ತಾಪಮಾನ ಏರಿಕೆಯ ಈ ಹೊತ್ತಿನಲ್ಲಿ ಯಾವೆಲ್ಲಾ ಒಣಹಣ್ಣುಗಳನ್ನು ನೆನೆಸಿ ತಿನ್ನಬೇಕು ನೋಡಿ.
ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾದಾಮಿಯನ್ನು ಬೇಸಿಗೆಯಲ್ಲಿ ಸೀಮಿತ ಪ್ರಮಾಣದಲ್ಲಿ ನೆನೆಸಿ ತಿನ್ನಬಹುದು. ಇದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದನ್ನು ನೆನೆಸಿ ತಿನ್ನುವುದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ.
ಆರೋಗ್ಯ ತಜ್ಞರ ಪ್ರಕಾರ ಬೇಸಿಗೆಯಲ್ಲಿ ವಾಲ್‌ನಟ್ ಅನ್ನು ನೆನೆಸಿಟ್ಟು ತಿನ್ನಬೇಕು. ಇಲ್ಲದಿದ್ದರೆ ದೇಹದಲ್ಲಿ ಉಷ್ಣಾಂಶ ಹೆಚ್ಚಬಹುದು.
ಲೈಂಗಿಕ ಆರೋಗ್ಯದಿಂದ ಹಿಡಿದು ರೋಗ ನಿರೋಧಕ ಶಕ್ತಿ ಹೆಚ್ಚುವವರೆಗೆ ಹಲವು ರೀತಿಯಲ್ಲಿ ಆರೋಗ್ಯ ಪ್ರಯೋಜನಗಳನ್ನು ನೀಡುವ ಅಂಜೂರವನ್ನು ಬೇಸಿಗೆಯಲ್ಲಿ ನೆನೆಸದೇ ತಿನ್ನಬಾರದು.
ಒಣದ್ರಾಕ್ಷಿ ದೇಹದಲ್ಲಿ ಉಷ್ಣಾಂಶವನ್ನು ಹೆಚ್ಚಿಸಬಹುದು. ಆದ್ದರಿಂದ ಬೇಸಿಗೆಯಲ್ಲಿ ಇದನ್ನು ನೆನೆಸಿಟ್ಟೇ ತಿನ್ನಬೇಕು. ಇದು ಶಕ್ತಿಯನ್ನು ಹೆಚ್ಚಿಸುತ್ತೆ, ದೃಷ್ಟಿ ಸುಧಾರಿಸಲು ಹಾಗೂ ಚರ್ಮ ಆರೋಗ್ಯಕ್ಕೆ ಇದು ಉತ್ತಮ.
ನೀರಿನಲ್ಲಿ ನೆನೆಸಿದ ಪಿಸ್ತಾ ತಿನ್ನುವುದು ದೇಹಕ್ಕೆ ಸಾಕಷ್ಟು ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ಇದರಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತದೆ.
ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ನಿಖರ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸುವುದು ಉತ್ತಮ.