ತಾಪಮಾನ ಹೆಚ್ಚಾದಂತೆ ಡೀಹೈಡ್ರೇಷನ್ ಆಗುವುದು ಸಹಜ. ಇದು ಜೀರ್ಣಕ್ರಿಯೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಕರುಳು ಹಾಗೂ ಹೊಟ್ಟೆ ಕಾಳಜಿಗೆ ಏನು ಮಾಡಬೇಕು ನೋಡಿ.
ಪ್ರೊಬಯೋಟಿಕ್ ಅಂಶ ಇರುವ ಆಹಾರಗಳಲ್ಲಿ ಕರುಳಿಗೆ ಉತ್ತಮ ಎನ್ನಿಸುವ ಬ್ಯಾಕ್ಟೀರಿಯಾ ಹಾಗೂ ಯೀಸ್ಟ್‌ಗಳಿರುತ್ತವೆ. ಇದರಿಂದ ಬೇಸಿಗೆಯಲ್ಲಿ ಕಾಡುವ ಅತಿಸಾರ, ಹೊಟ್ಟೆನೋವು, ಮಲಬದ್ಧತೆಯಂತಹ ಸಮಸ್ಯೆ ನಿವಾರಣೆಯಾಗುತ್ತದೆ.
ಯೋಗರ್ಟ್, ಮೊಸರು, ಕಿಮ್ಚಿ ಮುಂತಾದ ಆಹಾರ ಪದಾರ್ಥಗಳಲ್ಲಿ ಪ್ರೊಬಯೋಟಿಕ್ ಅಂಶವಿರುತ್ತದೆ.
ನಾರಿನಾಂಶ ಹೆಚ್ಚಿರುವ ಆಹಾರಗಳು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತವೆ, ಇವುಗಳ ಸೇವನೆಯಿಂದ ಕರುಳಿನ ಆರೋಗ್ಯ ಸುಧಾರಿಸುತ್ತದೆ.
ಹಣ್ಣುಗಳು, ತರಕಾರಿ, ಧಾನ್ಯಗಳು, ಕ್ಯಾರೆಟ್ ಇವುಗಳಲ್ಲಿ ನಾರಿನಾಂಶ ಸಮೃದ್ಧವಾಗಿದೆ.
ಕೆಫಿನ್ ಅಂಶದ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ಇದರಿಂದ ಅರ್ಜೀರ್ಣ, ಹೊಟ್ಟೆಯ ಕಿರಿಕಿರಿ ಉಂಟಾಗಬಹುದು.
ಕಾಫಿ, ಟೀ ಬದಲು ಬ್ಲ್ಯಾಕ್ ಟೀ, ಗ್ರೀನ್ ಟೀ ಆಯ್ಕೆ ಮಾಡಿಕೊಳ್ಳಬಹುದು.
ಹೈಡ್ರೇಟ್ ಆಗಿರುವುದು ಬೇಸಿಗೆಯ ಸರ್ವ ಸಮಸ್ಯೆಗಳಿಗೂ ಪ್ರಮುಖ ಪರಿಹಾರ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮಲಬದ್ಧತೆಯಂತಹ ಸಮಸ್ಯೆಯನ್ನೂ ಪರಿಹರಿಸುತ್ತದೆ.
ಬೇಸಿಗೆಯಲ್ಲಿ ಸಾಕಷ್ಟು ನೀರು ಕುಡಿಯುವ ಜೊತೆಗೆ ನೀರಿನಾಂಶ ಇರುವ ಸೌತೆಕಾಯಿ, ಕಲ್ಲಂಗಡಿ, ಕರ್ಬೂಜ, ಕಿತ್ತಳೆ ಹಣ್ಣಿನ ಸೇವನೆಗೂ ಒತ್ತು ನೀಡಿ. ಎಳನೀರು, ಹರ್ಬಲ್ ಟೀ ಕೂಡ ಬೇಸಿಗೆಯಲ್ಲಿ ಆರೋಗ್ಯಕ್ಕೆ ಉತ್ತಮ.
ಉತ್ಕರ್ಷಣ ವಿರೋಧಿ ಗುಣ ಹೊಂದಿರುವ ಅರಿಸಿನ ಕರುಳಿನ ಆರೋಗ್ಯದ ವಿಚಾರದಲ್ಲಿ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿರುವ ಕರ್ಕ್ಯುಮಿನ್ ಅಂಶ ಕರುಳಿಗೆ ಉತ್ತಮ.
ಇದನ್ನು ನಮ್ಮ ದೈನಂದಿನ ಆಹಾರದಲ್ಲಿ ಹೆಚ್ಚು ಹೆಚ್ಚು ಬಳಸುವುದರಿಂದ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ.
ಮನೆಯಲ್ಲಿ ಮೊಲ ಸಾಕಬಹುದೇ? ಜ್ಯೋತಿಷ್ಯದ ಪ್ರಕಾರ ಶುಭವೋ, ಅಶುಭವೋ?