ಸುಡು ಬಿಸಿಲಿನಲ್ಲೂ ದೇಹ ತಂಪಾಗಿರಬೇಕು ಅಂದ್ರೆ ಈ ಸರಳ ಸಲಹೆಗಳನ್ನು ಪಾಲಿಸಿ 

By Reshma
May 01, 2024

Hindustan Times
Kannada

ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ, ಇದರಿಂದ ದೇಹದ ಕಾವು ಜಾಸ್ತಿಯಾಗಿದೆ. ಬೇಸಿಗೆಯಲ್ಲಿ ದೇಹ ತಂಪಾಗಿರಬೇಕು ಅಂದ್ರೆ ಈ ಕೆಲವು ಟಿಪ್ಸ್‌ಗಳನ್ನು ಪಾಲಿಸೋಕೆ ಮರಿಬೇಡಿ. 

ಸಾಕಷ್ಟು ನೀರು ಕುಡಿಯಿರಿ. ನೀರಿನಾಂಶ ಇರುವ ಹಣ್ಣು, ತರಕಾರಿ ಸೇವನೆಯ ಜೊತೆಗೆ ಎಳನೀರು, ಮಜ್ಜಿಗೆ, ಹಣ್ಣಿನ ರಸವನ್ನು ಹೆಚ್ಚು ಸೇವಿಸಿ. 

ದಿನಕ್ಕೆರಡು ಬಾರಿ ಸ್ನಾನ ಮಾಡಿ, ಇದರಿಂದ ದೇಹ-ಮನಸ್ಸು ಎರಡೂ ಉಲ್ಲಸಿತಗೊಳ್ಳುತ್ತದೆ. ಆಗಾಗ ಮುಖ ಕೈ-ಕಾಲು ಅದರಲ್ಲೂ ಪಾದವನ್ನು ತೊಳೆಯುತ್ತಿರಿ. 

ಮಸಾಲೆಯುಕ್ತ, ಖಾರದ ಆಹಾರ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಿ.

ಕರಿದ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. 

ಕೆಫೀನ್‌ ಅಂಶ ಇರುವ ಆಹಾರ ಪದಾರ್ಥಗಳು ಕಾಫಿ, ಟೀ ಸೇವನೆಯಿಂದ ದೂರ ಇರುವುದು ಉತ್ತಮ. 

ಉಪ್ಪಿನಾಂಶದ ಸೇವನೆಯನ್ನು ಮಿತಿಗೊಳಿಸಿ 

ಮಾಂಸಾಹಾರಗಳು ಸೇವನೆಯು ದೇಹದಲ್ಲಿ ಉಷ್ಣತೆ ಹೆಚ್ಚುವಂತೆ ಮಾಡಬಹುದು. ಮೀನು ಹೊರತು ಪಡಿಸಿ ಉಳಿದ ಮಾಂಸಾಹಾರಗಳ ಸೇವನೆಯನ್ನು ಮಿತಿಗೊಳಿಸಿ. 

ದೇಹ ತಂಪಾಗಿಸುವ ಕೆಲವು ಯೋಗಭಂಗಿಗಳಿವೆ. ಆ ಭಂಗಿಗಳನ್ನು ಅಭ್ಯಾಸ ಮಾಡಿ, ನಿತ್ಯ ಅದನ್ನು ಅನುಸರಿಸಿ.

ಹೆಚ್ಚು ಹಣ್ಣು, ತರಕಾರಿ ಸೇವಿಸಿ. 

ರಾಜಸ್ಥಾನ್ ರಾಯಲ್ಸ್ ವಿರುದ್ಧ ಕೊಹ್ಲಿ ಬೆಂಕಿ ಪ್ರದರ್ಶನ