ತಡೆಯೋಕೆ ಆಗ್ತಿಲ್ವಾ ಬಾಯಿಹುಣ್ಣು ಉರಿ, ಇಲ್ಲಿವೆ ನೋಡಿ 5 ಮನೆಮದ್ದು

By Reshma
May 04, 2024

Hindustan Times
Kannada

ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದರಿಂದ ಬಾಯಿಹುಣ್ಣು ಉಂಟಾಗುತ್ತದೆ. ಇದು ನಮಗೆ ವಿಪರೀತ ನೋವು ನೀಡುವುದು ಸುಳ್ಳಲ್ಲ. ಇದರಿಂದ ನಮಗೆ ಆಹಾರ ತಿನ್ನಲು ಕೂಡ ಕಷ್ಟವಾಗಬಹುದು. 

ಬಾಯಿಹುಣ್ಣು ನಿವಾರಣೆಗೆ ಕೆಲವು ಮನೆಮದ್ದುಗಳಿವೆ. ಅಂತಹ ಮನೆಮದ್ದುಗಳ ಬಗ್ಗೆ ಇಲ್ಲಿದೆ ವಿವರ.

ಅಡುಗೆ ಸೋಡಾದ ಪೇಸ್ಟ್‌

ಸ್ವಲ್ಪ ಅಡುಗೆ ಸೋಡಾ ತೆಗೆದುಕೊಂಡು ಅದನ್ನು ನೀರಿನೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್‌ ಅನ್ನು ಅಲ್ಸರ್‌ ಅಥವಾ ಬಾಯಿಗೆ ಹುಣ್ಣು ಆಗಿರುವ ಜಾಗದಲ್ಲಿ ಹಚ್ಚಿ. 10 ನಿಮಿಷಗಳ ನಂತರ ಬಾಯಿ ತೊಳೆಯಿರಿ. ಬಾಯಿ ಹಣ್ಣು ನಿವಾರಿಸಲು ದಿನಕ್ಕೆ ಮೂರು ಬಾರಿ ಹೀಗೆ ಮಾಡಿ.

ಜೇನುತುಪ್ಪ 

ಬಾಯಿಹುಣ್ಣು ಆಗಿರುವ ಜಾಗಕ್ಕೆ ಜೇನುತುಪ್ಪ ಹಚ್ಚಿ. ಇದು ಉರಿಯೂತ ವಿರೋಧ ಗುಣಗಳನ್ನು ಹೊಂದಿದ್ದು ಬಾಯಿಹುಣ್ಣು ನಿವಾರಣೆಗೆ ಸಹಾಯ ಮಾಡುತ್ತದೆ. 

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು

ಉಗುರು ಬೆಚ್ಚಗಿನ ನೀರಿಗೆ ಉಪ್ಪು ಸೇರಿಸಿ ಈ ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಿ. ದಿನಕ್ಕೆರಡು ಬಾರಿ ಹೀಗೆ ಮಾಡುವುದರಿಂದ ಬಾಯಿಹುಣ್ಣು ನಿವಾರಣೆಯಾಗುತ್ತದೆ. 

ಆಪಲ್‌ ಸೀಡರ್‌ ವಿನೇಗರ್‌ ಹಚ್ಚಿ 

ಒಂದು ಚಮಚ ಆಪಲ್‌ ಸೀಡರ್‌ ವಿನೇಗರ್‌ ಅನ್ನು ಒಂದು ಕಪ್‌ ಬೆಚ್ಚಗಿನ ನೀರಿನಲ್ಲಿ ಮಿಶ್ರಣ ಮಾಡಿ. ಈ ನೀರಿನಿಂದ ಬಾಯಿ ಮುಕ್ಕಳಿಸಿ. ಬಾಯಿ ಹುಣ್ಣು ನಿವಾರಣೆಯಾಗಲು ದಿನದಲ್ಲಿ ನಾಲ್ಕೈದು ಬಾರಿ ಹೀಗೆ ಮಾಡಿ. 

ಸಾಕಷ್ಟು ನೀರು ಕುಡಿಯಿರಿ 

ದೇಹದಲ್ಲಿ ಉಷ್ಣಾಂಶ ಹೆಚ್ಚುವುದು, ಕರುಳಿನ ಆರೋಗ್ಯದಲ್ಲಿ ತೊಂದರೆ ಮುಂತಾದ ಕಾರಣಗಳಿಂದ ಬಾಯಿಹುಣ್ಣು ಉಂಟಾಗಬಹುದು. ಬಾಯಿ ಹುಣ್ಣು ಬೇಗನೆ ಗುಣವಾಗಲು ಸಾಕಷ್ಟು ನೀರು ಕುಡಿಯುವುದು ಅವಶ್ಯ. 

ನಾಲಿಗೆಯಲ್ಲಿದೆ ನಿಮ್ಮ ಆರೋಗ್ಯ; ಬಣ್ಣವೇ ಹೇಳುತ್ತೆ ಅನಾರೋಗ್ಯ ಸಮಸ್ಯೆ